ಪ್ಯಾರಿಸ್ : ಫ್ರಾನ್ಸ್ ಮತ್ತು ಸ್ಪೇನ್ ದೇಶಗಳಲ್ಲಿ ವ್ಯಾಪಿಸುತ್ತಿರುವ ಕಾಳ್ಗಿಚ್ಚಿನಿಂದಾಗಿ ಅಪಾರ ಪ್ರಮಾಣದ ಹಾನಿಯುಂಟಾಗಿದೆ ಮತ್ತು ಸುಮಾರು 2.5 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.
ಫ್ರಾನ್ಸ್‌ನಿಂದ 1,97,000 ಜನರನ್ನು ಸ್ಥಳಾಂತರಿಸಿದರೆ, ಸ್ಪೇನ್‌ನಿಂದ 70,000 ಜನರನ್ನು ಸ್ಥಳಾಂತರಿಸಲಾಗಿದೆ.
'ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರೂ ಕಾಳ್ಗಿಚ್ಚು ಹತೋಟಿಗೆ ಬರುತ್ತಿಲ್ಲ' ಎಂದು ಫ್ರಾನ್ಸ್ ಸಚಿವ ಲಾರೆಂಟ್ ನೂನೇಜ್ ತಿಳಿಸಿದ್ದಾರೆ.
ಫ್ರಾನ್ಸ್‌ನಾದ್ಯಂತ ಸಂಭವಿಸಿದ ಭೀಕರ ಕಾಳ್ಗಿಚ್ಚಿಗೆ ಸುಮಾರು 98,000 ಎಕರೆ ಪ್ರದೇಶ ಅಗ್ನಿಗೆ ಆಹುತಿಯಾಗಿದೆ. ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

