HEALTH TIPS

ರಷ್ಯಾ-ಉಕ್ರೇನ್‌ ಸಂಘರ್ಷ: 16 ಮಂದಿ ಸಾವು

 ಮಾಸ್ಕೊ/ಕೀವ್‌: ಉಕ್ರೇನ್‌ ಮತ್ತು ರಷ್ಯಾದ ನಡುವಿನ ಡ್ರೋನ್‌ ದಾಳಿಯು ಶನಿವಾರ ತೀವ್ರಗೊಂಡಿದ್ದು, 16 ಮಂದಿ ಮೃತಪಟ್ಟಿದ್ದಾರೆ. 


ಉಕ್ರೇನ್‌ 300 ಅಧಿಕ ಡ್ರೋನ್‌ಗಳಿಂದ ದಾಳಿ ಮಾಡಿದೆ ಎಂದು ರಷ್ಯಾ ಹೇಳಿದೆ. ಉಕ್ರೇನ್‌ ನಡೆಸಿದ ದಾಳಿಯಿಂದಾಗಿ ಸೈಬೀರಿಯದಲ್ಲಿನ ತೈಲ ಸಂಸ್ಕರಣಾ ಘಟಕ ಮತ್ತು ಪ್ರಮುಖ ನಗರ ಹಾನಿಗೀಡಾಗಿವೆ.

ಅಝೋವ್ ಗ್ರಾಮದ ಮೇಲೆ ಉಕ್ರೇನ್ ನಡೆಸಿದ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ 8 ಮಂದಿ ಮೃತಪಟ್ಟಿದ್ದಾರೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ.

ನಾಗರಿಕ ಮೂಲಸೌಕರ್ಯದ ಮೇಲೆ ಡ್ರೋನ್‌ ದಾಳಿ ನಡೆದಿದ್ದು, ಭಾರಿ ಬೆಂಕಿ ಕಾಣಿಸಿಕೊಂಡಿತ್ತು. ಮೂವರು ಮೃತಪಟ್ಟಿದ್ದಾರೆ ಎಂದು ಸುಮಿ ಪ್ರಾದೇಶಿಕ ಮುಖ್ಯಸ್ಥ ಒಲೆಹ್ ಹಿರಿಹೊರೊವ್ ಶನಿವಾರ ತಿಳಿಸಿದ್ದಾರೆ.

ಉಕ್ರೇನ್‌ನ ಆಗ್ನೇಯ ಭಾಗದಲ್ಲಿರುವ ಝಪೊರಿಝಿಯಾದಲ್ಲಿ ಶಾಪಿಂಗ್‌ ಸೆಂಟರ್‌ನಲ್ಲಿ ಶುಕ್ರವಾರ ರಾತ್ರಿ ಬೆಂಕಿ ಹತ್ತಿಕೊಂಡಿದ್ದು ಹಲವರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ಪ್ರಾದೇಶಿಕ ಮುಖ್ಯಸ್ಥರು ತಿಳಿಸಿದ್ದಾರೆ.

ಝಪೊರಿಝಿಯಾದಲ್ಲಿನ ಪ್ರವಾಸಿ ಶಿಬಿರದ ಮೇಲೆಯೂ ದಾಳಿ ನಡೆದಿದ್ದು, 14 ಮಂದಿ ಗಾಯಗೊಂಡಿದ್ದಾರೆ.

ಕೀವ್‌ನಲ್ಲಿನ ರಕ್ಷಣಾ ಕೈಗಾರಿಕೆಯ ಶುಕ್ರವಾರ ನಡೆದಿದ್ದ ರಷ್ಯಾ ದಾಳಿಯಲ್ಲಿ 10 ಮಂದಿ ಮೃತಪಟ್ಟಿದ್ದರು ಮತ್ತು ನೂರು ಮಂದಿ ಗಾಯಗೊಂಡಿದ್ದರು.

ಉಕ್ರೇನ್‌ ಗಡಿಯ ಸಮೀಪ ತನ್ನ ವಾಯುಪ್ರದೇಶದಲ್ಲಿ ಹಾರಾಡುತ್ತಿದ್ದ ಡ್ರೋನ್‌ ಅನ್ನು ರೊಮೇನಿಯಾವು ಹೊಡೆದುರುಳಿಸಿದೆ. ಎರಡು ದಿನಗಳಲ್ಲಿ ರೊಮೇನಿಯಾ ಹೊಡೆದುರುಳಿಸಿದ ಎರಡನೇ ಡ್ರೋನ್‌ ಇದಾಗಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries