ಬೀಜಿಂಗ್: ಚೀನಾದ ದಕ್ಷಿಣ ಭಾಗಕ್ಕೆ ನೌಲ್ ಚಂಡಮಾರುತ ಅಪ್ಪಳಿಸುತ್ತಿದ್ದು, ರೈಲು ಸೇವೆ ಸ್ಥಗಿತಗೊಂಡಿದೆ. ವಾಣಿಜ್ಯ ನಗರಿ ಹಾಂಗ್‌ಕಾಂಗ್‌ನಲ್ಲಿ ವಿಮಾನಗಳ ಸಂಚಾರ ರದ್ದಾಗಿದೆ.
ಹಾಂಗ್‌ಕಾಂಗ್‌ನಿಂದ ಗುವಾಂಗ್‌ಡಾಂಗ್ ಪ್ರಾಂತ್ಯದವರೆಗಿನ ಕರಾವಳಿಗೆ ಚಂಡಮಾರುತ ಭಾನುವಾರ ಅಪ್ಪಳಿಸಲಿದೆ.
ನೆಲಕ್ಕೆ ಅಪ್ಪಳಿಸುವ ವೇಳೆ, ಚಂಡಮಾರುತದ ವೇಗ ಗಂಟೆಗೆ 126ರಿಂದ 151 ಕಿ.ಮೀ.ನಷ್ಟು ಇರಲಿದೆ ಎಂದು ಚೀನಾದ ರಾಷ್ಟ್ರೀಯ ಹವಾಮಾನ ಕೇಂದ್ರ ತಿಳಿಸಿದೆ.
ಈಗಾಗಲೇ 20 ಸಾವಿರ ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದೂ ಹೇಳಿದೆ.
ಶನಿವಾರ ಮತ್ತು ಭಾನುವಾರ ಹಾಂಗ್‌ಕಾಂಗ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಲ್ಲ ವಿಮಾನಗಳ ಹಾರಾಟ ರದ್ದು ಮಾಡಲಾಗಿತ್ತು ಎಂದು ಕ್ಯಾಥೆ ಪೆಸಿಫಿಕ್ ವಿಮಾನಯಾನ ಸಂಸ್ಥೆ ತಿಳಿಸಿದೆ.

