HEALTH TIPS

ಇನ್‌ಸ್ಟಾದಲ್ಲಿ ಮೀಸಲಾತಿ ವಿರೋಧಿ ಆಂದೋಲನದ ಸದ್ದು: 46 ಲಕ್ಷ ಫಾಲೋವರ್ಸ್!

ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ರೀತಿಯಲ್ಲಿಯೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖವಾಗಿಯೂ ಇನ್‌ಸ್ಟಾಗ್ರಾಮ್‌ನಲ್ಲಿ ಮೀಸಲಾತಿ ವಿರೋಧಿ ಆಂದೋಲನವು ಭಾರಿ ಸದ್ದು ಮಾಡುತ್ತಿದೆ. 


ಇನ್‌ಸ್ಟಾಗ್ರಾಮ್‌ನಲ್ಲಿ ಆರಂಭವಾದ ಮೀಸಲಾತಿ ಹಠಾವೋ ಆಂದೋಲನ (ಆರ್‌ಎಚ್‌ಎ) ಈಗಾಗಲೇ 46 ಲಕ್ಷ ಅನುಯಾಯಿಗಳನ್ನು ಹೊಂದಿದ್ದು, ಯುವಜನರಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ದೇಶದಲ್ಲಿ ಜಾತಿ ಆಧಾರಿತ ಮೀಸಲಾತಿ ಪದ್ಧತಿಯನ್ನು ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿರುವ ಅಭಿಯಾನ ಇದಾಗಿದೆ. ಆರ್‌ಎಚ್‌ಎ ರೀಲ್ಸ್ ಹಾಗೂ ಪೋಸ್ಟ್‌ಗಳಿಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಉನ್ನತ ಶಿಕ್ಷಣ ಸಂಸ್ಥೆಗಳ ಪ್ರವೇಶ ಹಾಗೂ ಸರ್ಕಾರಿ ಉದ್ಯೋಗ ನೇಮಕಗಳಲ್ಲಿ ಜಾತಿಯ ಬದಲಾಗಿ ಅಭ್ಯರ್ಥಿಯ ಅಂಕ, ಸಾಮರ್ಥ್ಯ ಮತ್ತು ಅರ್ಹತೆಯನ್ನು ಮಾನದಂಡವಾಗಿ ಪರಿಗಣಿಸಬೇಕು ಒಂದು ಒತ್ತಾಯಿಸಲಾಗಿದೆ.

ಸಾಮಾಜಿಕ ಹಾಗೂ ಶೈಕ್ಷಣಿಕ ಜಾತಿ ಆಧಾರಿತ ಮೀಸಲಾತಿಯನ್ನು ರದ್ದುಗೊಳಿಸಿ, ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಸರ್ಕಾರಿ ಹಂತದಲ್ಲಿ ಆರ್ಥಿಕ ನೆರವು ಮತ್ತು ಸ್ಕಾಲರ್‌ಶಿಪ್ ಒದಗಿಸಬೇಕೆಂದು ಬೇಡಿಕೆ ಇರಿಸಲಾಗಿದೆ.

ಇದು ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ ಅಭಿಯಾನವಲ್ಲ ಎಂದು ಆರ್‌ಎಚ್‌ಎ ಸ್ಪಷ್ಟಪಡಿಸಿದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries