ಕಾಸರಗೋಡು: ಬಾಲಕಿಯನ್ನು ಮನೆಗೆ ಕರೆಸಿಕೊಂಡು ದೌರ್ಜನ್ಯಕ್ಕೆತ್ನಿಸಿದ 70ರ ಹರೆಯದ ವೃದ್ಧನನ್ನು ಚಂದೇರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪಡನ್ನ ಗಣೇಶ್‍ಮುಖ್ ನಿವಾಸಿ ಎ.ಸಿ. ಅಬೂಬಕ್ಕರ್ ಬಂಧಿತ.
ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ 14ರ ಹರೆಯದ ಬಾಲಕಿಯನ್ನು ತಿನಿಸು ಕೊಡುವ ಭರವಸೆಯೊಂದಿಗೆ ಮನೆಗೆ ಕರೆಸಿ, ಬಾಲಕಿಗೆ ಕಿರುಕುಳ ನೀಡಲೆತ್ನಿಸಿದ್ದಾನೆ. ಬಾಲಕಿ ಇದನ್ನು ತಡೆಯಲೆತ್ನಿಸುತ್ತಿದ್ದಂತೆ ವೃದ್ಧ ಉಪಟಳ ಮುಂದುವರಿಸಿದಾಗ ಸಾವರಿಸಿಕೊಂಡು ಪರಾರಿಯಾದ ಬಾಲಕಿ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾಳೆ. ಮನೆಯವರು ನೀಡಿದ ಮಾಹಿತಿಯನ್ವಯ ಪೊಲೀಸರು ಆರೋಪಿಯನ್ನು ಆತನ ಮನೆಯಿಂದ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಈತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕಿರುಕುಳದ ಬಗ್ಗೆ ಈತನ ವಿರುದ್ಧ ಈ ಹಿಂದೆಯೂ ಆರೋಪ ಕೇಳಿ ಬಂದಿತ್ತೆನ್ನಲಾಗಿದೆ.


