ಕಾಸರಗೋಡು: ಯುವತಿಯೊಬ್ಬಳೊಂದಿಗೆ ಅನುಚಿತವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡಿನ ಉದುಮ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಶ್ರೀಜಿತ್ ಕೊಡೋತ್ ಎಂಬವರನ್ನು ಪಕ್ಷದ ಸ್ಥಾನಮಾನಗಳಿಂದ ಅಮಾನತುಗೊಳಿಸಿ ಕಾಸರಗೋಡು ಡಿಸಿಸಿ ಪ್ರಕಟಣೆ ಹೊರಡಿಸಿದೆ. ತನ್ನೊಂದಿಗೆ ಅವಮಾನಕರ ರೀತಿಯಲ್ಲಿ ವರ್ತಿಸಿರುವ ಬಗ್ಗೆ ಯುವತಿ ಮಂಡಲ ಕಾಂಗ್ರೆಸ್ ಸಮಿತಿಗೆ ನೀಡಿದ ರೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಸಮಿತಿ ಈ ಕ್ರಮ ಕೈಗೊಂಡಿದೆ.
ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಶ್ರೀಜಿತ್ ಕೋಡೋತ್ ಅವರನ್ನು ಪಕ್ಷದ ಜವಾಬ್ದಾರಿಗಳಿಂದ ಅಮಾನತುಗೊಳಿಸಿರುವುದಲ್ಲದೆ, ಸಂಘಟನಾ ಚಟುಟಿಕೆಗಳಿಂದ ದೂರ ಉಳಿಯುವಂತೆ ನಿರ್ದೇಶಿಸಿರುವುದಾಗಿ ಯುವಕಾಂಗ್ರೆಸ್ ಜಿಲ್ಲಾ ಸಮಿತಿ ಪ್ರಕಟಣೆ ತಿಳಿಸಿದೆ.

