ಕುಂಬಳೆ: ಕುಂಬಳೆ ಮಾಟಂಗುಳಿಯ ಕ್ವಾಟ್ರಸ್ ಒಂದರಲ್ಲಿ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಕಟ್ಟಡ ಬೆಂಕಿಗಾಹುತಿಯಾಗಿದೆ. ಮಾಟಂಗುಳಿಯಲ್ಲಿ ಹಲವಾರು ಮಂದಿ ವಾಸ ಮಾಡುವ ಕ್ವಾಟ್ರಸ್‍ನಲ್ಲಿ ಈ ದುರಂತ ಸಂಭವಿಸಿದೆ. ಒಂದು ಕುಟುಂಬದ ವಾಸ್ತವ್ಯ ಹೂಡಿದ್ದ ಕೊಠಡಿ ಸಂಪೂರ್ಣ ಉರಿದು ಹಾನಿಗೀಡಾಗಿದ್ದು, ತಕ್ಷಣ ಅಗ್ನಿಶಾಮಕದಳ, ಪೆÇಲೀಸರು ಹಾಗೂ ಸ್ಥಳೀಯರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಿಂದ ಉಳಿದ ಕಡೆ ಬೆಂಕಿ ವ್ಯಾಪಿಸದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಚರ್ಮುರಿ ವ್ಯಾಪಾರಿ, ಶೋರ್ನೂರು ನಿವಾಸಿ ಕೃಷ್ಣ ಹಾಗೂ ಕುಟುಂಬ ವಾಸಿಸುತ್ತಿದ್ದ ಕ್ವಾಟ್ರಸ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೃಷ್ಣ ಅವರ ಕುಟುಂಬ ಕಳೆದ ಸೋಮವಾರ ಊರಿಗೆ ತೆರಳಿದ್ದು, ಶನಿವಾರ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಅನಾಹುತ ಸಂಭವಿಸಿದೆ. ಬೆಂಕಿ ತಗಲಿ ಕೊಠಡಿಯಲ್ಲಿದ್ದ ಎಲ್ಲಾ ಸಾಮಾಗ್ರಿಗಳು ಉರಿದು ನಾಶವಾಗಿದೆ. ಕ್ವಾಟ್ರಸ್‍ಗಿರುವ ವಿದ್ಯುತ್ ಸಂಪರ್ಕವನ್ನು ವಿದ್ಯುತ್ ಇಲಾಖೆ ವಿಚ್ಛೇದಿಸಿದೆ. 10ರಷ್ಟು ಕೊಠಡಿಗಳಿರುವ ಹಳೇ ಹಾಸಿನ ಈ ಕಟಟಡದ ಉಳಿದ ಕೊಠಡಿಯಲ್ಲದ್ದವರನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ.
ಕುಂಬಳೆ ಠಾಣೆ ಇನ್ಸ್‍ಪೆಕ್ಟರ್ ಬೈಜು ಕೆ. ಜೋಸೆಫ್ ನೇತೃತ್ವದ ಪೊಲೀಸ್ ಮತ್ತು ಕಾಸರಗೋಡಿನ ಅಗ್ನಿಶಾಮಕದಳದ ಎರಡು ತಂಡ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದೆ.



