ಕಾಸರಗೋಡು: ಎಡನೀರು ಶ್ರೀಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಷಷ್ಠ ಚಾತುರ್ಮಾಸ್ಯ ಜುಲೈ 29ರಿಂದ ಸೆಪ್ಟೆಂಬರ್ 26ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಚಾತುರ್ಮಾಸ್ಯದ ಪುಣ್ಯ ದಿನಗಳಲ್ಲಿ ಶ್ರೀಮಠದಲ್ಲಿ ಪ್ರತಿನಿತ್ಯ ಪೂಜೆ, ಹವನಾದಿಗಳು ನಡೆಯುವ ಹಿನ್ನೆಲೆಯಲ್ಲಿ ದಿನ ಪೂಜೆಗಿರುವ ಹಾಗೂ ಹೋಮ ಹವನಾದಿಗಳಿಗಿರುವ ತುಳಸಿ, ಹೂವಿನ ಮಾಲೆ (ಬಾಳೆ ನಾರಿನಲ್ಲಿ ಕಟ್ಟಿದ್ದು), ಎಳನೀರು, ದನದ ತುಪ್ಪ, ಹಾಲು ಇತ್ಯಾದಿ ಸುವಸ್ತುಗಳು ಅಗತ್ಯವಿದ್ದು, ಆಸ್ತಿಕರು ತಮ್ಮಲ್ಲಿ ಇಂತಹ ಸುವಸ್ತುಗಳಿದ್ದಲ್ಲಿ ಶ್ರೀಮಠಕ್ಕೆ ತಲುಪಿಸಿ ಸಹಕರಿಸುವಂತೆ ಎಡನೀರು ಶೀಮಠದ ಚಾತುರ್ಮಾಸ್ಯ ಸಮಿತಿ ಪ್ರಕಟಣೆ ತಿಳಿಸಿದೆ.


