HEALTH TIPS

Ayodhya Ram Mandir ಕಾಣಿಕೆ ಕಳ್ಳತನ ಪ್ರಕರಣ | ಗೆಳತಿಗೆ ದುಬಾರಿ ಐಫೋನ್‌ ಗಿಫ್ಟ್; ತಪ್ಪೊಪ್ಪಿಗೆ ನೀಡಿದ ಆರೋಪಿ ಅವಿನಾಶ್ ಶುಕ್ಲಾ

 ಯೋಧ್ಯೆ: ಅಯೋಧ್ಯೆಯ ರಾಮ ಮಂದಿರದ ಕಾಣಿಕೆ ಪೆಟ್ಟಿಗೆಗಳಿಂದ ಕಳವು ಮಾಡಲಾಗಿದೆ ಎಂದು ಆರೋಪಿಸಲಾದ ಹಣವನ್ನು ತನ್ನ ಕುಟುಂಬ, ಸ್ನೇಹಿತರು ಹಾಗೂ ಗೆಳತಿಗಾಗಿ ದುಬಾರಿ ಉಡುಗೊರೆಗಳು ಮತ್ತು ವೈಯಕ್ತಿಕ ಖರ್ಚುಗಳಿಗೆ ಬಳಸಿರುವುದಾಗಿ ಪ್ರಕರಣದ ಆರೋಪಿಯಾಗಿರುವ ಅವಿನಾಶ್ ಶುಕ್ಲಾ ವಿಚಾರಣೆ ವೇಳೆ ತಪ್ಪೊಪ್ಪಿಗೆ ನೀಡಿದ್ದಾನೆ ಎಂದು ತನಿಖೆಗೆ ಸಂಬಂಧಿಸಿದ ಮೂಲಗಳು ತಿಳಿಸಿವೆ.


ರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ಬಂಧಿತರಾಗಿರುವ ಎಂಟು ಎಣಿಕೆ ಸಿಬ್ಬಂದಿಗಳಲ್ಲೊಬ್ಬರಾದ ಅವಿನಾಶ್ ಶುಕ್ಲಾ, ವಿಚಾರಣೆ ವೇಳೆ ಕಳುವಾದ ಹಣದ ಬಳಕೆಗೆ ಸಂಬಂಧಿಸಿದಂತೆ ಹಲವು ಮಹತ್ವದ ಮಾಹಿತಿಗಳನ್ನು ನೀಡಿದ್ದಾನೆ ಎಂದು ಮೂಲಗಳು ಹೇಳಿವೆ. ದುಬಾರಿ ಐಫೋನ್ ಖರೀದಿಯಿಂದ ಹಿಡಿದು ಕುಟುಂಬದ ವಿವಾಹ ಸಮಾರಂಭಕ್ಕೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿರುವುದಾಗಿ ಆತ ಹೇಳಿದ್ದಾನೆ ಎನ್ನಲಾಗಿದೆ.

ಲಕ್ಷಾಂತರ ಭಕ್ತರನ್ನು ಬೆಚ್ಚಿಬೀಳಿಸಿರುವ ಈ ಕಳ್ಳತನ ಪ್ರಕರಣದ ಬಳಿಕ ಕಳುವಾದ ಹಣದ ಜಾಡು ಪತ್ತೆಹಚ್ಚಲು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಪ್ರಕರಣದಲ್ಲಿ ಕಳುವಾದ ಒಟ್ಟು ಮೊತ್ತ ಕೋಟಿಗಳಲ್ಲಿದೆ ಎಂದು ಅಂದಾಜಿಸಲಾಗಿದ್ದು, ಹಣದ ಹರಿವಿನ ಸಂಪೂರ್ಣ ವಿವರವನ್ನು ಸಂಗ್ರಹಿಸಲು ತನಿಖಾಧಿಕಾರಿಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ವಿಚಾರಣೆ ವೇಳೆ ತನ್ನ ಪಾಲಿಗೆ ಬಂದ ಹಣದಲ್ಲಿ ಸುಮಾರು 19 ಲಕ್ಷ ರೂ.ಗಳನ್ನು ತನ್ನ ಕುಟುಂಬ ಮತ್ತು ಸ್ನೇಹಿತರಿಗಾಗಿ ಖರ್ಚು ಮಾಡಿರುವುದಾಗಿ ಶುಕ್ಲಾ ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಈ ಮೊತ್ತದಲ್ಲಿ ತನ್ನ ಸಹೋದರನ ಅದ್ದೂರಿ ವಿವಾಹಕ್ಕಾಗಿ ಸುಮಾರು 6 ಲಕ್ಷ ರೂ. ವೆಚ್ಚ ಮಾಡಿದ್ದು, ಮತ್ತೊಬ್ಬ ಸಹೋದರನಿಗೆ 5ರಿಂದ 6 ಲಕ್ಷ ರೂ.ಗಳನ್ನು ನೀಡಿರುವುದಾಗಿಯೂ ಆತ ಹೇಳಿದ್ದಾನೆ ಎನ್ನಲಾಗಿದೆ.

ಇದಲ್ಲದೆ, ತನ್ನ ಗೆಳತಿಗೆ ದುಬಾರಿ ಐಫೋನ್‌ನ್ನು ಉಡುಗೊರೆಯಾಗಿ ನೀಡಿದ್ದು, ಆಕೆಯ ಬ್ಯಾಂಕ್ ಖಾತೆಗೆ 2.5 ಲಕ್ಷ ರೂ.ಗಳನ್ನು ವರ್ಗಾಯಿಸಿರುವುದಾಗಿಯೂ ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ಮೂಲಗಳು ಹೇಳಿವೆ.

ಪೊಲೀಸ್ ದಾಖಲೆಗಳ ಪ್ರಕಾರ, ಶುಕ್ಲಾ ಸುಮಾರು 20 ಲಕ್ಷ ರೂ.ಗಳನ್ನು ಮನೆಗೆ ಕೊಂಡೊಯ್ದಿದ್ದಾನೆ. ಪ್ರಕರಣದ ಶಂಕಿತರ ಪೈಕಿ ವೈಯಕ್ತಿಕವಾಗಿ ಅತ್ಯಧಿಕ ಮೊತ್ತವನ್ನು ತೆಗೆದುಕೊಂಡ ಆರೋಪಿಯೂ ಆತನೇ ಎಂದು ದಾಖಲೆಗಳು ಸೂಚಿಸುತ್ತವೆ ಎಂದು NDTV ವರದಿ ಮಾಡಿದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries