ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ 6ನೇ ಚಾತುರ್ಮಾಸ್ಯ ವ್ರತಾಚರಣೆ ಜು.29 ರಿಂದ ಶ್ರೀಮಠದಲ್ಲಿ ಆರಂಭಗೊಳ್ಳಿದ್ದು, ಆಚರಣೆಯ ಸುಗಮ ನಿರ್ವಹಣೆಗೆ ಎಲ್ಲಾ ಸಮಿತಿಗಳ ಎರಡನೇ ಹಂತದ ಸಭೆ ಭಾನುವಾರ ಸಂಜೆ ಶ್ರೀಮಠದ ಸಭಾಂಗಣದಲ್ಲಿ ಗಂಗಾಧರನ್ ನಾಯರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಹಿರಿಯರಾದ ಮಾಧವ ಹೇರಳ ಉಪಸ್ಥಿತರಿದ್ದು ಮಾತನಾಡಿದರು. ವಿವಿಧ ಉಪ ಸಮಿತಿಗಳ ಪ್ರಮುಖರು ಈ ವರೆಗಿನ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು. ವೈದಿಕ ಸಮಿತಿ, ಸ್ವಾಗತ ಸಮಿತಿ, ಉಗ್ರಾಣ, ಹೊರೆಕಾಣಿಕೆ, ಊಟೋಪಚಾರ, ಸಾಂಸ್ಕøತಿಕ, ಭಜನೆ, ಪ್ರಚಾರ ಸಮಿತಿಗಳ ಈ ವರೆಗಿನ ಚಟುವಟಿಕೆಗಳನ್ನು ವಿವರಿಸಲಾಯಿತು.
ಹೊರೆಕಾಣಿಕೆ ಸಮರ್ಪಣೆಯ ಭಾಗವಾಗಿ ಜು.28 ರಂದು ಎಡನೀರು ಪರಿಸರದ ಭಕ್ತಾದಿಗಳ ವತಿಯಿಂದ ಸಂಜೆ 4ಕ್ಕೆ ಶ್ರೀಮಠಕ್ಕೆ ಸಮರ್ಪಣೆ ನಡೆಸುವ ಕುರಿತು ನಿರ್ಧಾರ ಕೈಗೊಳ್ಳಲಾಯಿತು. ಸಾಂಪ್ರದಾಯಿಕ ಆಚರಣೆಗಳಿಗೆ ತೊಡಕುಗಳಾಗದಂತೆ ಎರಡು ತಿಂಗಳ ವ್ರತಾಚರಣೆ ಕಾರ್ಯಕ್ರಮ ಯಶಸ್ವಿಗೊಳಿಸಲು ತೀರ್ಮಾನಿಸಲಾಯಿತು. ಶ್ರೀಮಠದ ಆಡಳಿತಾಧಿಕಾರಿ ರಾಜೇಂದ್ರ ಕಲ್ಲೂರಾಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸೂರ್ಯನಾರಾಯಣ ಭಟ್ ಎಡನೀರು ನಿರೂಪಿಸಿ, ಮಹೇಶ್ ವಳಕ್ಕುಂಜ ವಂದಿಸಿದರು. ಸರೋಜಾ ಭಟ್ ಪ್ರಾರ್ಥನೆಗೈದರು.

.jpg)
.jpg)
