ತಿರುವನಂತಪುರಂ: ಶಾಲೆಯಿಂದ ಹೊರಗುಳಿದವರಿಗೆ ಮತ್ತು ಸಾರ್ವಜನಿಕ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿ ಶಿಕ್ಷಣವನ್ನು ನಿಲ್ಲಿಸಬೇಕಾದವರಿಗೆ ಕೇರಳ ಪೋಲೀಸರ ಯೋಜನೆಯು ಎರಡನೇ ಅವಕಾಶವನ್ನು ಒದಗಿಸಿದೆ.
ವಿವಿಧ ಕಾರಣಗಳಿಂದ ಕಲಿಕಾ ಪ್ರಕ್ರಿಯೆಯಿಂದ ವಿಮುಖರಾದ ಮಕ್ಕಳನ್ನು ಗುರುತಿಸುವುದು ಮತ್ತು ಉತ್ತಮ ಶಿಕ್ಷಣ ಮತ್ತು ಸರಿಯಾದ ಮಾರ್ಗದರ್ಶನದ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ವಿವಿಧ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಮತ್ತು ಸಾರ್ವಜನಿಕರ ಭಾಗವಹಿಸುವಿಕೆಯೊಂದಿಗೆ ಕೇರಳ ಪೆÇಲೀಸರ ನೇತೃತ್ವದಲ್ಲಿ ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತರಲಾಗುತ್ತಿದೆ. ಆಯಾ ಜಿಲ್ಲೆಗಳಲ್ಲಿರುವ ವಿಶೇಷ ತರಬೇತಿ ಕೇಂದ್ರಗಳಲ್ಲಿ ತಜ್ಞ ಶಿಕ್ಷಕರ ಮೇಲ್ವಿಚಾರಣೆಯಲ್ಲಿ ಮಕ್ಕಳಿಗೆ ವಿಶೇಷ ತರಗತಿಗಳನ್ನು ಏರ್ಪಡಿಸಲಾಗುವುದು.
ಅಧ್ಯಯನದ ಭಯವನ್ನು ಹೋಗಲಾಡಿಸಲು, ಮಕ್ಕಳಿಗೆ ಅಗತ್ಯವಾದ ಪ್ರೇರಣೆ ತರಗತಿಗಳು, ವ್ಯಕ್ತಿತ್ವ ವಿಕಸನ ತರಬೇತಿ ಮತ್ತು ಮಾನಸಿಕ ಬೆಂಬಲವನ್ನು ನೀಡಲಾಗುವುದು.
ಉತ್ತಮ ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ, ಯೋಜನೆಯ ಭಾಗವಾಗಿ ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಇತರ ವೃತ್ತಿಪರ ಕೋರ್ಸ್‍ಗಳಲ್ಲಿ ಕೌಶಲ್ಯ ತರಬೇತಿಯನ್ನು ನೀಡುವ ಗುರಿಯನ್ನು ಹೊಂದಿದೆ.
ಚಿಕ್ಕ ವಯಸ್ಸಿನಲ್ಲಿಯೇ ಶಾಲೆ ಬಿಡುವ ಮಕ್ಕಳು ಮಾದಕ ದ್ರವ್ಯ ಮಾಫಿಯಾಗಳ ಬಲೆಗೆ ಬಿದ್ದು ಅನಗತ್ಯ ಅಪರಾಧಗಳಿಗೆ ಬಲಿಯಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಪೆÇಲೀಸರು ಈ ಯೋಜನೆಯನ್ನು ರೂಪಿಸಿದ್ದಾರೆ.
ಹಿಂದಿನ ವರ್ಷಗಳಲ್ಲಿ, 'ಊಔPಇ' ಯೋಜನೆಯ ಮೂಲಕ ಪರೀಕ್ಷೆ ಬರೆದ ಹೆಚ್ಚಿನ ಮಕ್ಕಳು ಹೆಚ್ಚಿನ ಯಶಸ್ಸಿನ ಪ್ರಮಾಣವನ್ನು ಸಾಧಿಸಿದ್ದಾರೆ ಮತ್ತು ಉನ್ನತ ಶಿಕ್ಷಣ ಮತ್ತು ವಿವಿಧ ವೃತ್ತಿ ಕ್ಷೇತ್ರಗಳಿಗೆ ಹೋಗಿದ್ದಾರೆ.
ಶಾಲೆ ಬಿಟ್ಟ ಅರ್ಹ ಮಕ್ಕಳು ಅಥವಾ ಅವರ ಪೋಷಕರು ಈ ಸುವರ್ಣ ಅವಕಾಶವನ್ನು ಬಳಸಿಕೊಳ್ಳಬಹುದು. ಮಾಹಿತಿ ಮತ್ತು ನೋಂದಣಿಗಾಗಿ, ಅಧಿಕೃತ ದೂರವಾಣಿ ಸಂಖ್ಯೆ: 94979 00200 ಅನ್ನು ಸಂಪರ್ಕಿಸಲು ಸೂಚಿಸಲಾಗಿದೆ.

