ಮಂಜೇಶ್ವರ: ವರ್ಕಾಡಿ ದೇವಂದಪಡು ನಿವಾಸಿ ಕಿಶನ್ ಕುಮಾರ್ ಶೆಟ್ಟಿ (32) ನಾಪತ್ತೆಯಗಿರುವ ಬಗ್ಗೆ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ದೇವಂದಪಡಿನಲ್ಲಿ ಕೆಂಪು ಕಲ್ಲು ಕ್ವಾರಿಯ ರೈಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಇವರು ಜು. 16ರಂದು ಮಧ್ಯಾಹ್ನ 2 ಗಂಟೆಗೆ ಮನೆಯಿಂದ ಹೊರಗೆ ತೆರಳಿದ್ದು, ಅನಂತರ ಮರಳಿ ಬಂದಿಲ್ಲ. ಕಿಶನ್ ಕುಮಾರ್ ಮೊಬೈಲ್ ಪೋನ್‍ಗೆ ಕರೆ ಮಾಡಿದಾಗ ಅದು ಸ್ವಿಚ್ ಆಫ್ ಆಗಿರುವುದಾಗಿ ಇವರ ತಂದೆ ಐತ್ತಪ್ಪ ಶೆಟ್ಟಿ ಪೆÇಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

