HEALTH TIPS

ರಾಣಿಪುರಂ ಪ್ರವಾಸೋದ್ಯಮ ಸಂಕೀರ್ಣ ಉದ್ಘಾಟನೆ, ಚಂದ್ರಗಿರಿ ಕೋಟೆಗೆ ಕಾಯಕಲ್ಪ: ಡಿಟಿಪಿಸಿ ಸಭೆಯಲ್ಲಿ ಜಿಲ್ಲಾಧಿಕರಿ ಸೂಚನೆ

ಕಾಸರಗೋಡು: ರಾಣಿಪುರಂ ಪರಿಸರ-ಪ್ರವಾಸೋದ್ಯಮ ಯೋಜನೆಯನ್ವಯ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿನಿಗಮ(ಡಿಟಿಪಿಸಿ)ವತಿಯಿಂದ ನಿರ್ಮಿಸಿರುವ ಪ್ರವಾಸೋದ್ಯಮ ಸಂಕೀರ್ಣವನ್ನು ಆಗಸ್ಟ್‍ನಲ್ಲಿ ಪ್ರವಾಸಿಗರಿಗೆ ತೆರೆದುಕೊಡಲು ನಿರ್ಧರಿಸಲಾಗಿದೆ. ಸ್ವಚ್ಛತಾ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸಿದ ನಂತರ ಅತಿಶೀಘ್ರ ಪ್ರವಾಸೋದ್ಯಮ ಸಂಕೀರ್ಣದ ಸೌಲಭ್ಯವನ್ನು ಪ್ರವಾಸಿಗರಿಗೆ ತೆರೆದುಕೊಡಲಾಗುವುದು ಎಂದು ಡಿಟಿಪಿಸಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ತಿಳಿಸಿದ್ದಾರೆ. 


ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ ನಡೆಯುತ್ತಿರುವ ಕಾಮಗಾರಿ ವೇಗ ಪಡೆದುಕೊಳ್ಳುತ್ತಿದ್ದು,  ರಾಣಿಪುರಂನಲ್ಲಿ ಸುಮಾರು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಹನ್ನೆರಡು ಅತಿಥಿ ಕೊಠಡಿಗಳು ಮತ್ತು ಸಂಬಂಧಿತ ಸೌಲಭ್ಯಗಳನ್ನು ಹೊಂದಿರುವ ಈ ಸಂಕೀರ್ಣದಲ್ಲಿ ಹೆಚ್ಚುವರಿ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. 65 ಲಕ್ಷ ರೂಪಾಯಿ ವೆಚ್ಚದಲ್ಲಿ ಅತಿಥಿ ಗೃಹಗಳ ನವೀಕರಣ ಯೋಜನೆಯನ್ವಯ ಕೈಗೊಂಡಿರುವ ಚಟುವಟಿಕೆಗಳಲ್ಲಿ ಮನೆಯ ನವೀಕರಣ, 13 ಲಕ್ಷ ವೆಚ್ಚದಲ್ಲಿ ಶೌಚಗೃಹ ಹಾಗೂ ಕಾಟೇಜ್‍ಗಳ ನವೀಕರಣ ಮತ್ತು ಪೆವಿಲಿಯನ್ ಹಾಗೂ ಸಭಾಂಕಣದ ಅಭಿವೃದ್ಧಿ ಒಳಗೊಂಡಿದೆ.   

ಕೋಟೆ ನಿರ್ವಹಣಾ ಕಾಮಗಾರಿ:

ಜಿಲ್ಲೆಯ ಇನ್ನೊಂದು ಪ್ರಮುಖ ಪ್ರವಾಸಿ ತಾಣ ಚಂದ್ರಗಿರಿ ಕೋಟೆಯನ್ನು ಅಭಿವೃದ್ಧಿಪಡಿಸುವ ಕಾಮಗಾರಿಗೆ ಡಿಟಿಪಿಸಿ ಮುಂದಾಗಿದ್ದು, ಮೂಲಸೌಕರ್ಯ ಅಳವಡಿಸುವ ಕಾಮಗಾರಿ ಶೀಘ್ರ ಆರಂಭಿಸಲು ಸಭೆ ತೀರ್ಮಾನಿಸಿತು.  ಈಗಾಗಲೇ ಪ್ರಾಚ್ಯವಸ್ತು ಇಲಾಖೆಯು  ಡಿಟಿಪಿಸಿಗೆ ಹಸ್ತಾಂತರಿಸಿರುವ ಚಂದ್ರಗಿರಿ ಕೋಟೆ ವಠಾರದ ಶೌಚಗೃಹಗಳ ನವೀಕರಣದೊಂದಿಗೆ,  ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಮೂಲಕ ಆಹಾರ ಮಳಿಗೆ ಸ್ಥಾಪಿಸಲು ಮತ್ತು ಅವುಗಳ ನಿರ್ವಹಣೆಗಾಗಿ ಕ್ರಮಕೈಗೊಳ್ಳಲಾಗುವುದು. ಕೋಟೆಯ ಮೂಲ ಆಶಯ ಹಾಗೂ ಪ್ರಾಚೀನತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು, ಕೋಟೆಯ ಆವರಣದಲ್ಲಿ ಯಾವುದೇ ಹೊಸ ನಿರ್ಮಾಣಕಾರ್ಯ ನಡೆಸದಿರಲೂ ತೀರ್ಮಾನಿಸಲಾಯಿತು. ರಾಜ್ಯಪ್ರಾಚ್ಯವಸ್ತು ಇಲಾಖೆಯ ಸಹಯೋಗದೊಂದಿಗೆ ಡಿಟಿಪಿಸಿ ಮೂಲಕ ಚಂದ್ರಗಿರಿ ಕೋಟೆಯ ನಿರ್ವಹಣೆ ಮತ್ತು ಪಾಲನೆಗಾಗಿ ಈಗಾಗಲೇ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. 

ಜತೆಗೆ ಬೇಕಲ ಕೋಟೆಯಲ್ಲಿ ಬೆಳಕು ಮತ್ತು ಧ್ವನಿ ಪ್ರದರ್ಶನವನ್ನು (ಲೈಟ್ ಅಂಡ್ ಸೌಂಡ್ ಶೋ) ಪುನರಾರಂಭಿಸಲು, ತಿಳುವಳಿಕಾ ಒಪ್ಪಂದವನ್ನು (ಎಂಓಎ) ನವೀಕರಿಸುವ ಕುರಿತು ಪ್ರವಾಸೋದ್ಯಮ ಇಲಾಖೆಗೆ ಪತ್ರವನ್ನು ಸಲ್ಲಿಸಲಾಗಿದೆ ಎಂದೂ ತಿಳಿಸಿದರು.

ಡಿಟಿಪಿಸಿ ಕಾರ್ಯದರ್ಶಿ ಜೆ.ಕೆ. ಜಿಜೇಶ್ ಕುಮಾರ್ ಅವರು ಯೋಜನೆಗಳ ಕುರಿತು ವಿವರಿಸಿದರು. ಪ್ರವಾಸೋದ್ಯಮ ಇಲಾಖೆಯ ಎಟಿಐಒ ಅಂಜು ಮೋಹನ್, ನಿರ್ಮಿತಿಯ ಮಹಾ ವ್ಯವಸ್ಥಾಪಕ ಇ.ಪಿ. ರಾಜ್‍ಮೋಹನ್, ಕೆಡಿಪಿ  ಯೋಜನಾ ಸಹಾಯಕ ಅಬ್ದುಲ್ ಸಾಬಿದ್, ಕೆಇಎಲ್ ಮತ್ತು ಸಿಲ್ಕ್ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries