ಕಾಸರಗೋಡು: ಜಿಲ್ಲಾ ಕಿವುಡರ ಕ್ರೀಡಾ ಪರಿಷತ್ತಿನ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಕಿವುಡರ ಚೆಸ್ ಚಾಂಪಿಯನ್ಶಿಪ್ ಕಾಞಂಗಾಡಿನಲ್ಲಿ ಜರುಗಿತು. ಕಾಞಂಗಾಡು ಬ್ಲಾಕ್ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚಾಂಪಿಯನ್ಶಿಪ್ಪನ್ನು ಕಾಸರಗೋಡು ಜಿಲ್ಲಾ ಕ್ರೀಡಾ ಪರಿಷತ್ತಿನ ಅಧ್ಯಕ್ಷ ರಘುನಾಥ್ ಉದ್ಘಾಟಿಸಿದರು.
ಕಾಸರಗೋಡು ಜಿಲ್ಲಾ ಕಿವುಡರ ಕ್ರೀಡಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಪವಿತ್ರನ್ ಟಿ. ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಶಿಕ್ಷಕ ಪ್ರಶಸ್ತಿ ವಿಜೇತ ಜೋಷಿಮೋನ್ ಕೆ.ಟಿ. ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮುಹಮ್ಮದ್ ರಶಾದ್ ಎ.ಸಿ, ಶೀಬಾ ಪವಿತ್ರನ್ ಉಪಸ್ಥಿತರಿದ್ದರು. ಕಿವುಡರ ಜಿಲ್ಲಾ ಕ್ರೀಡಾ ಪರಿಷತ್ತಿನ ಉಪಾಧ್ಯಕ್ಷ ಶನಿಲ್ ಕುಮಾರ್ ಸ್ವಾಗತಿಸಿದರು. ಕೋಶಾಧಿಕಾರಿ ಸುನಿಲ್ ಟಿ.ಟಿ. ವಂದಿಸಿದರು.
ಸಬ್ಜೂನಿಯರ್ ಬಾಲಕ-ಬಾಲಕಿಯರು, ಜೂನಿಯರ್ ಬಾಲಕ-ಬಾಲಕಿಯರು ಹಾಗೂ ಸೀನಿಯರ್ ಪುರುಷರು ಮತ್ತು ಮಹಿಳೆಯರಿಗಾಗಿ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿದ್ದು, ವಿಜೇತರು ಆಗಸ್ಟ್ 2 ರಂದು ತಿರುವನಂತಪುರದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕಿವುಡ ಚಾಂಪಿಯನ್ಶಿಪ್ನಲ್ಲಿ ಕಾಸರಗೋಡು ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.



