ಕಾಸರಗೋಡು: ವಿಕಲಚೇತನ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಪಾಕಂಚೇರಿಪ್ಪಾರ ಅಂಜೆಲ್ ನಿವಾಸಿ ಎ.ಕೆ. ಶಾಹಿದ್ (35) ಎಂಬಾತನನ್ನು ಬೇಕಲ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಈತನಿಗೆ ನ್ಯಾಯಾಲಯ ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಿದೆ. ಶಾಹಿದ್ ಸೆರೆಯಾಗುವುದರೊಂದಿಗೆ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೇರಿದೆ.
16ರ ಹರೆಯದ ಬಾಲಕ ಸಹಿತ ಮೂರು ಮಂದಿಯನ್ನು ಇತ್ತೀಚೆಗೆ ಬಂಧಿಸಲಾಗಿದೆ.
ಕೋಟೆಕುಳಂ ರೈಲ್ವೇ ನಿಲ್ದಾಣ ಸಮೀಪದ ಸಾಲಿ ಯಾನೆ ಮುಹಮ್ಮದ್ ಸ್ವಾಲಿಹ್ (29), ಪೆರುಂಬಳ ಕೋಳಿಯಡ್ಕದ ಶೆರೀಫ್ ಕಡಪ್ಪಳಂ (40), ಮೈಲಾಟಿ ಕುಟ್ಟಪ್ಪುನ್ನ ಕುರುಕ್ಕನ್‍ಕುನ್ನು ನಿವಾಸಿ ಹಾಗೂ ತಚ್ಚಂಗಾಡ್‍ನಲ್ಲಿ ವಾಸಿಸುವ ಎ.ಕೆ. ಮುಹಮ್ಮದ್ ನೌಶಾದ್ (39) ಹಾಗೂ 16ರ ಹರೆಯದ ಒಬ್ಬ ಬಾಲಕ ಬಂಧಿತರು.
ವಿಕಲಚೇತನಳಾದ ಬಾಲಕಿಯನ್ನು ಶಾಹಿದ್ ಹಲವು ಬಾರಿ ಫೆÇೀನ್‍ನಲ್ಲಿ ಸಂಪರ್ಕಿಸಿದ್ದು, ಈ ಮಾಹಿತಿ ರೋಪಿಗಳ ಬಂಧನಕ್ಕೆ ನೆರವಾಗಿತ್ತು. ಬಾಲಕಿಗೆ ಕಿರುಕುಳ ನೀಡಿದ ಸಂಬಂಧ ಚೈಲ್ಡ್ ಲೈನ್ ಅಧಿಕಾರಿಗಳು ನೀಡಿದ ಮಾಹಿತಿಯಂತೆ ಬೇಕಲ ಪೆÇಲೀಸರು 5 ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.

