HEALTH TIPS

ಡಿಎಂಕೆ ಘೋಷಿಸಿದ್ದ ಯೋಜನೆಯ ಹೆಸರನ್ನು ಕೈಬಿಟ್ಟ ಟಿವಿಕೆ ಸರ್ಕಾರ

 ಚೆನ್ನೈ: ತಮಿಳುನಾಡಿನ ಆಡಳಿತಾರೂಢ ಸಿ.ಜೋಸೆಫ್ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' ಸರ್ಕಾರವು ಮಹಿಳೆಯರ ಉಚಿತ ಬಸ್ ಪ್ರಯಾಣ ಯೋಜನೆಯ ಹೆಸರನ್ನು ಬದಲಾಯಿಸಿರುವುದು, ಇದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.


ಈ ಹಿಂದೆ ಡಿಎಂಕೆ ಸರ್ಕಾರ ಜಾರಿಗೆ ತಂದಿದ್ದ 'ಮಗಳಿರ್ ವಿಡಿಯಲ್ ಪಯಣಂ' ಯೋಜನೆಯ ಹೆಸರಿನಿಂದ 'ವಿಡಿಯಲ್' (ಬೆಳಗು/ಮುಂಜಾನೆ) ಎಂಬ ಪದವನ್ನು ಕೈಬಿಟ್ಟು, ಕೇವಲ 'ಮಗಳಿರ್ ಪಯಣಂ' ಎಂದು ಮರುನಾಮಕರಣ ಮಾಡಲಾಗಿದೆ.

ಯೋಜನೆಯ ಹೆಸರನ್ನಷ್ಟೇ ಬದಲಾಯಿಸಲಾಗಿದ್ದು, ಮಹಿಳೆಯರಿಗೆ ಸಿಗುವ ಉಚಿತ ಪ್ರಯಾಣದ ಸೌಲಭ್ಯಗಳು ಎಂದಿನಂತೆ ಮುಂದುವರಿಯಲಿವೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ನಾನು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತ, ಯಾರ ಕೈಗೊಂಬೆಯೂ ಅಲ್ಲ: ಊಆಏಗೆ ಖಂಡ್ರೆಊಒಖಿ ಕಾರ್ಖಾನೆ ಜಾಗಕ್ಕೆ ಬರಲು ಸಿದ್ಧ: ಕುಮಾರಸ್ವಾಮಿ ಸವಾಲು ಸ್ವೀಕರಿಸಿದ ಖಂಡ್ರೆ

ಸಾರಿಗೆ ಸಂಸ್ಥೆಯ ಬಸ್‌ಗಳ ಡಿಜಿಟಲ್ ಬೋರ್ಡ್‌ಗಳಲ್ಲಿ ಹೊಸ ಹೆಸರನ್ನು ಅಳವಡಿಸಲಾಗಿದ್ದು, ಇದರ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಹರಿದಾಡುತ್ತಿವೆ.

ಹೆಸರಷ್ಟೇ ಬದಲಾಗಬಹುದು, ಇತಿಹಾಸವಲ್ಲ: ಡಿಎಂಕೆ ಕಿಡಿ

ಸರ್ಕಾರದ ಈ ದಿಢೀರ್ ನಿರ್ಧಾರಕ್ಕೆ ಪ್ರತಿಪಕ್ಷ ಡಿಎಂಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. 2021ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ 'ವಿಡಿಯಲ್' ಎಂಬುದು ಡಿಎಂಕೆ ಪಕ್ಷದ ಪ್ರಮುಖ ರಾಜಕೀಯ ಘೋಷಣೆಯಾಗಿತ್ತು.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡು ಅಸಮಾಧಾನ ಹೊರಹಾಕಿರುವ ಡಿಎಂಕೆ ಹಿರಿಯ ನಾಯಕ ತಂಗಂ ತೆನ್ನರಸು, 'ಯೋಜನೆಯ ಹೆಸರು ಬದಲಾಯಿಸಬಹುದು, ಆದರೆ ಇತಿಹಾಸವನ್ನಲ್ಲ' ಎಂದು ಟೀಕಿಸಿದ್ದಾರೆ.

ಪೋಷಕರೇ.. ಅತಿಯಾಗಿ ಮೊಬೈಲ್ ಬಳಸುವ ಮಕ್ಕಳ ಮೇಲೆ ಇರಲಿ ಗಮನಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಶಿಕ್ಷಣ ಸಂಸ್ಥೆಗಳಿಗೆ ಹೈಕೋರ್ಟ್‌ ಚಾಟಿ

'ಲಕ್ಷಾಂತರ ಮಹಿಳೆಯರ ಜೀವನದಲ್ಲಿ ಮಹತ್ತರ ಬದಲಾವಣೆ ತಂದಿರುವ ಯೋಜನೆಯ ಹೆಸರನ್ನು ಬದಲಾಯಿಸಿರುವುದು ಆಡಳಿತಾತ್ಮಕ ಹಿತದೃಷ್ಟಿಯಿಂದಲ್ಲ, ಬದಲಿಗೆ ಇದೊಂದು ರಾಜಕೀಯ ದ್ವೇಷದ ಪರಮಾವಧಿ. ಯೋಜನೆಯ ಯಶಸ್ಸು ಇರುವುದು ಹೆಸರಿನಲ್ಲಲ್ಲ, ಬದಲಾಗಿ ಜನರ ಜೀವನದಲ್ಲಿ. ಅದು ತಂದಿರುವ ಪ್ರಗತಿಯಲ್ಲಿ ಅಡಗಿದೆ. ಇಂತಹ ಹೆಸರು ಬದಲಿಸುವ ರಾಜಕೀಯಕ್ಕೆ ಸಮಯ ವ್ಯಯಿಸುವ ಬದಲು, ಜನಪರವಾದ ಹೊಸ ಯೋಜನೆಗಳನ್ನು ತರಲು ಸರ್ಕಾರ ಗಮನ ಹರಿಸಲಿ' ಎಂದು ನಾಯಕ ತೆನ್ನರಸು ಹೇಳಿದ್ದಾರೆ.










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries