HEALTH TIPS

ಸುದ್ದಿಗಳ ಸತ್ಯಾಸತ್ಯತೆ ಪರಿಶೀಲಿಸುವಲ್ಲಿ ಪತ್ರಕರ್ತರು ಜಾಗ್ರತೆ ಪಾಲಿಸಬೇಕು-'ಮಾಧ್ಯಮ ಕಾರ್ಯಾಗಾರ' ಉದ್ಘಾಟಿಸಿ ಜಿಲ್ಲಾಧಿಖಾರಿ ಅರ್ಜುನ್ ಪಾಂಡಿಯನ್ ಅಭಿಪ್ರಾಯ

ಕಾಸರಗೋಡು: ಮಾಧ್ಯಮ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನವು ಅನೇಕ ಸವಾಲುಗಳನ್ನು ಒಡ್ಡುತ್ತಿರುವ ಮಧ್ಯೆ ಸುಳ್ಳು ಸುದ್ದಿಗಳನ್ನು ಎದುರಿಸುವಲ್ಲಿ ಮತ್ತು ವರದಿಗಳ ಸತ್ಯಾಸತ್ಯತೆ ಪರಿಶೀಲಿಸುವಲ್ಲಿ ಪತ್ರಕರ್ತರು ಜಾಗರೂಕತೆ ಪಾಲಿಸಬೇಕು ಎಂದು ಕಾಸರಗೋಡು ಜಿಲ್ಲಾಧಿಕರಿ ಅರ್ಜುನ್ ಪಾಂಡಿಯನ್ ತಿಳಿಸಿದ್ದಾರೆ.

ಅವರು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಚಟುವಟಿಕೆ ನಡೆಸುತ್ತಿರುವ 'ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ' (ಪಿಐಬಿ) ಕೊಚ್ಚಿ ವತಿಯಿಂದ ಕಾಸರಗೋಡಿನ 'ಹೈವೇ ಕ್ಯಾಸಲ್' ಸಭಾಂಗಣದಲ್ಲಿ  ಸ್ಥಳೀಯ ಪತ್ರಕರ್ತರಿಗಾಗಿ ಆಯೋಜಿಸಲಾಗಿದ್ದ'ಮಾಧ್ಯಮ ಕಾರ್ಯಾಗಾರ' ಉದ್ಘಾಟಿಸಿ ಮಾತನಾಡಿದರು. 


ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಮಾಧ್ಯಮವು, ಸಾಮಾನ್ಯ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ಮತ್ತು ಅವುಗಳ ಪರಿಹಾರಕ್ಕೆ ಸಹಕರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಸಾರ್ವಜನಿಕರ ಸಮಸ್ಯೆಗಳು ಮತ್ತು ಅಹವಾಲುಗಳನ್ನು ಅಧಿಕಾರಿಗಳಿಗೆ ತಲುಪಿಸುವ ಮೂಲಕ ಮಾಧ್ಯಮವು ಒಂದು ಸೇತುವೆಯಂತೆ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.  

ಪಿಐಬಿ ಕೇರಳ-ಲಕ್ಷದ್ವೀಪ ವಲಯ ಹೆಚ್ಚುವರಿ ಮಹಾನಿರ್ದೇಶಕ ವಿ. ಪಳನಿಚಾಮಿ ಐಐಎಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಅತಿ ವೇಗವಾಗಿ ಬದಲಾಗುತ್ತಿರುವ ಮಾಧ್ಯಮ ರಂಗಕ್ಕೆ ಅನುಗುಣವಾಗಿ ಪತ್ರಕರ್ತರು ತಮ್ಮ ಕೌಶಲ್ಯ, ನಿರಂತರವಾಗಿ ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆಯಿದೆ ಎಂದು ತಿಳಿಸಿದರು.

ಪಿಐಬಿ ಕೊಚ್ಚಿ ಮತ್ತು ಆಲ್ ಇಂಡಿಯಾ ರೇಡಿಯೋ ಕೊಚ್ಚಿ ನಿರ್ದೇಶಕಿ ಧನ್ಯಾ ಸನಲ್ ಐಎಎಸ್ ಅತಿಥಿಯಾಗಿ ಭಾಗವಹಿಸಿದ್ದರು.  ಈ ಸಂದರ್ಭ ಪದ್ಮಶ್ರೀ ಪ್ರಶಸ್ತಿ ಪುರಸ್ಕøತ  ಸತ್ಯನಾರಾಯಣ ಬೆಳೇರಿ ಮತ್ತು ಹಿರಿಯ ಪತ್ರಕರ್ತ  ಎಂ. ಓ. ವರ್ಗೀಸ್ ಅವರನ್ನು ಸನ್ಮಾನಿಸಲಾಯಿತು. 

ಕಾಸರಗೋಡು ಪ್ರೆಸ್ ಕ್ಲಬ್‍ನ ಅಧ್ಯಕ್ಷ  ಸಿಜು ಕಣ್ಣನ್ ಅವರು ಮುಖ್ಯ ಭಾಷಣ ಮಾಡಿದರು.   ಪಿಐಬಿ ಕೊಚ್ಚಿಯ ಮಾಧ್ಯಮ ಮತ್ತು ಸಂವಹನಾಧಿಕಾರಿ  ಶಮಿಲಾ ಕೆ.ವೈ.   ಸ್ವಾಗತಿಸಿದರು. ಪ್ರೆಸ್ ಕ್ಲಬ್‍ನ ಕಾರ್ಯದರ್ಶಿ  ಪ್ರದೀಪ್ ನಾರಾಯಣನ್ ವಂದಿಸಿದರು. 

ಆಧುನಿಕ ಅಂಚೆ ಕಚೇರಿಗಳ ಕಾರ್ಯಚಟುವಟಿಕೆ ಬಗ್ಗೆ ಕೋಯಿಕ್ಕೋಡ್ ಉತ್ತರ ವಲಯ ಪೆÇೀಸ್ಟ್‍ಮಾಸ್ಟರ್ ಜನರಲ್ ಕಚೇರಿಯ  ಸಹಾಯಕ ನಿರ್ದೇಶಕ  ಕೆ. ಮನೋಜ್,  ಸಹಕಾರ ಸಚಿವಾಲಯದ ಜಾಗೃತಿ ಮತ್ತು ಸಾಮಥ್ರ್ಯ ವೃದ್ಧಿ ಉಪಕ್ರಮಗಳ ಕುರಿತು  ಕಣ್ಣೂರಿನ ಸಹಕಾರಿ ನಿರ್ವಹಣಾ ಸಂಸ್ಥೆ(ಐಸಿಎಂ) ನಿರ್ದೇಶಕ ಡಾ. ಎ. ಕೆ. ಜಾಕಿರ್ ಹುಸೇನ್,

"ಸೈಬರ್ ಜಾಗೃತಿ: ಹೊಸ ಬೆದರಿಕೆಗಳು ಮತ್ತು ಸುರಕ್ಷಿತ ಕ್ರಮಗಳು" ಎಂಬ ವಿಷಯದ ಬಗ್ಗೆ ಕಾಸರಗೋಡು ಸೈಬರ್ ಅಪರಾಧ ಪೆÇಲೀಸ್ ಠಾಣೆಯ ಸಬ್-ಇನ್ಸ್‍ಪೆಕ್ಟರ್ ಶಿನು ಕೆ.ಬಿ ಹಾಗೂ 'ಎಐ-ಆಧಾರಿತ ಪತ್ರಿಕೋದ್ಯಮ-ವರದಿಗಾರಿಕೆ, ಬರವಣಿಗೆ ಮತ್ತು ಸಂಪಾದನಾ ಸಾಧನಗಳು' ಎಂಬ ವಿಷಯದ ಕುರಿತು ಪ್ಯಾಕ್ಟ್ ಚೆಕ್ಕರ್ ಮತ್ತು ಎಐ ತರಬೇತುದಾರ  ಹಬೀಬ್ ರೆಹಮಾನ್ ವೈ.ಪಿ.ತರಗತಿ ನಡೆಸಿಕೊಟ್ಟರು. 

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಜಾರಿಗೆ ತಂದಿರುವ ಪತ್ರಕರ್ತ ಕಲ್ಯಾಣ ಯೋಜನೆಯನ್ವಯ ಪತ್ರಕರ್ತರಿಗೆ ಲಭ್ಯವಿರುವ ವಿವಿಧ ಪ್ರಯೋಜನಗಳ ಬಗ್ಗೆ ಪಿಐಬಿ ಕೊಚ್ಚಿಯ ಸಹಾಯಕ ನಿರ್ದೇಶಕಿ ಲಕ್ಷ್ಮಿ ಪ್ರಿಯಾ ಎಸ್.ಎಸ್. ಐಐಎಸ್ ಮಾಹಿತಿ ನೀಡಿದರು.  ನಂತರ ಶಿಬಿರಾರ್ಥಿಗಳ ಅನುಭವ ಹಂಚಿಕೆ, ಪತ್ರಕರ್ತರೊಂದಿಗೆ ಸಂವಾದ ನಡೆಯಿತು. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಕುರಿತು ಸ್ಥಳೀಯ ಪತ್ರಕರ್ತರಿಗೆ ಮಾಹಿತಿ ನೀಡುವ ಉದ್ದೇಶದಿಂದ, ಕಾಸರಗೋಡು ಪ್ರೆಸ್ ಕ್ಲಬ್‍ನ ಸಹಯೋಗದಲ್ಲಿ  ಕಾರ್ಯಾಗಾರ  ಆಯೋಜಿಸಲಾಗಿತ್ತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries