ಕೋಲ್ಕತ್ತ: ಟಿಎಂಸಿಯ ರಾಜ್ಯಸಭಾ ಸದಸ್ಯೆ ಕೋಯಲ್ ಮಲಿಕ್ (ರುಕ್ಮಿಣಿ ಮಲಿಕ್) ಅವರು ತಮ್ಮ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ.
2026ರ ಏಪ್ರಿಲ್‌ನಲ್ಲಿ ಅವರು ರಾಜ್ಯಸಭಾ ಸದಸ್ಯೆಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಮಮತಾ ಬ್ಯಾನರ್ಜಿ ಅವರು ಅಧಿಕಾರ ಕಳೆದುಕೊಂಡ ಬಳಿಕ ಟಿಎಂಸಿಯ ಒಂಭತ್ತು ರಾಜ್ಯಸಭಾ ಸದಸ್ಯರ ಪೈಕಿ ನಾಲ್ವರು ರಾಜೀನಾಮೆ ನೀಡಿದ್ದಾರೆ.
ಮೂವರು ಬಿಜೆಪಿಗೆ ಸೇರಿಕೊಂಡಿದ್ದಾರೆ. ರುಕ್ಮಿಣಿ ಅವರು ಯಾವ ಪಾಳಯವನ್ನು ಸೇರಿಕೊಳ್ಳಲಿದ್ದಾರೆ ಎಂದು ಖಚಿತವಾಗಿಲ್ಲ. ಆದರೆ, ರಾಜೀನಾಮೆ ಬಳಿಕ ಅವರು ಬಿಜೆಪಿ ನಾಯಕ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿದರು. ಆದ್ದರಿಂದ ಅವರೂ ಬಿಜೆಪಿ ಸೇರುವುದು ಸ್ಪಷ್ಟ ಎನ್ನಲಾಗುತ್ತಿದೆ.
ನಟಿಯಾಗಿ ಚಿತ್ರರಂಗದಲ್ಲಿ ಹೆಸರು ಮಾಡಿದ್ದ ಕೋಯಲ್ ಅವರನ್ನು ಮಮತಾ ಬ್ಯಾನರ್ಜಿ ಅವರು ರಾಜಕಾರಣಕ್ಕೆ ಕರೆತಂದಿದ್ದರು. ಪಕ್ಷ ಸೇರಿಕೊಂಡ ಒಂದೇ ತಿಂಗಳಲ್ಲಿ ರಾಜ್ಯಸಭೆಗೆ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದರು. ಇಲ್ಲಿಯವರೆಗೆ ಒಂದೂ ಅಧಿವೇಶದಲ್ಲಿಯೂ ಅವರು ಭಾಗವಹಿಸಿಲ್ಲ.

