ಬದಿಯಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕಾಸರಗೋಡು ತಾಲೂಕು ಜನಜಾಗೃತಿ ವೇದಿಕೆ ಆಶ್ರಯದಲ್ಲಿ ನವಜೀವನೋತ್ಸವ ಕಾರ್ಯಕ್ರಮ ಮತ್ತು ಕೆಸರಿನಲ್ಲಿ ಜನಪ್ರಿಯ ಕ್ರೀಡೆ ಸಾಂಸ್ಕøತಿಕ ಸಂಭ್ರಮ ಉಬ್ರಂಗಳ ಮಹಾದೇವ ಪಾರ್ವತಿ ಶಾಸ್ತರ ದೇವಸ್ಥಾನ ಜರಗಿತು.
ಕಾರ್ಯಕ್ರಮವನ್ನು ಶ್ರೀಕೃಷ್ಣ ಶಿವಕೃಪ ಕುಂಜತ್ತೂರು ಉದ್ಘಾಟಿಸಿ, ಕೇವಲ ವ್ಯಸನ ಮುಕ್ತಿಗೆ ಸೀಮಿತವಾಗದೆ, ಬಡತನದಲ್ಲಿರುವ ಕುಟುಂಬಗಳಿಗೆ ಆರ್ಥಿಕ ನೆರವು, ಮಹಿಳಾ ಸಬಲೀಕರಣ ಮತ್ತು ಮಾನವೀಯ ಮೌಲ್ಯಗಳನ್ನು ಬಿತ್ತುವ ಮೂಲಕ ಕುಟುಂಬಗಳನ್ನು ಸರಿಪಡಿಸುವ ಕೆಲಸ ನಡೆಸುತ್ತಿರುವ ನವಜೀವನ ಸಮಿತಿಯ ಚಟುವಟಿಕೆ ಶ್ಲಾಘನೀಯ. ಸಮಾಜದ ಗಣ್ಯರು, ಧಾರ್ಮಿಕ ಮುಖಂಡರು ಹಾಗೂ ಸ್ಥಳೀಯರನ್ನು ಒಗ್ಗೂಡಿಸಿ ಜನರಲ್ಲಿ ಜಾಗೃತಿ ಮೂಡಿಸಲು ಪ್ರತ್ಯೇಕ ವೇದಿಕೆಗಳನ್ನು ನಿರ್ಮಿಸಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಪಾನಮುಕ್ತರಾದಂತಹ ನವ ಜೀವನ ಸದಸ್ಯರಿಗಾಗಿ ವಿಶೇಷ ನವಜೀವನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡು ದಿನವಿಡೀ ಅವರ ಕುಟುಂಬದ ಜೊತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮತ್ತಷ್ಟು ವೇದಿಕೆಗಳನ್ನು ಸೃಷ್ಟಿಸಿ ಅವರನ್ನು ಸಮಾಜದಲ್ಲಿ ತೊಡಗಿಸುವಂತೆ ಮಾಡಲಾಗುತ್ತಿದೆ. ಧರ್ಮಸ್ಥಳದ ಹತ್ತಿರದ ಗ್ರಾಮದಲ್ಲಿ ಆರಂಭಿಸಿದ ಯೋಜನೆ ಇಡೀ ರಾಜ್ಯವನ್ನು ವ್ಯಾಪಿಸಿದೆ. ಯಶಸ್ವಿಯೂ ಆಗಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ವೀರೇಂದ್ರ ಹೆಗ್ಗಡೆ ಅವರ ಗ್ರಾಮೀಣ ಅಭಿವೃದ್ಧಿ ಕಾರ್ಯ ಸರ್ಕಾರಗಳಿಗೇ ಮಾದರಿಯಾಗಿದೆ ಎಂದು ಧರ್ಮಸ್ಥಳ ಯೋಜನೆಯ ನಿರ್ದೇಶಕರಾದ ಬಾಬು ನಾಯ್ಕ್ ದಿಕ್ಸೂಚಿ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಉಬ್ರಂಗಳ ಕ್ಷೇತ್ರದ ಮ್ಯಾನೇಜಿಂಗ್ ಟ್ರಸ್ಟಿ ಕಿರಣ್ ಕುಮಾರ್ ಕುಣಿಕುಳ್ಳಾಯ, ಕುಬ್ಡಾಜೆ ಗ್ರಾಮ ಪಂಚಾಯತಿ ಸದಸ್ಯೆ ಐಶಾತ್ ಮಾಸಿದ, ಡಾ ವೇಣುಗೋಪಾಲ್ ಕಳೆಯತ್ತೋಡಿ, ಡಾ ಶ್ರೀನಿಧಿ ಸರಳಾಯ, ಚಂದ್ರಹಾಸ ಮಾಸ್ತರ್ ಮುನಿಯೂರು, ಮಧುಸೂದನ ಆಯರ್, ಜಯರಾಜ ಕುಣಿಕುಳ್ಳಾಯ ಹರೀಶ್ ಕುಣಿಕುಳ್ಳಾಯ, ಮಂಜುನಾಥ ಆಳ್ವ, ಸುಶೀಲಾ ಬಾಲಗೋಪಾಲನ್ ಮುಂತಾದವರು ಉಪಸ್ಥಿತರಿದ್ದು ಮಾತನಾಡಿದರು.
ಸಂಜೀವ ಶೆಟ್ಟಿ ಮೊಟ್ಟೆಕುಂಜ, ಕಿರಣ್ ಮಾಸ್ತರ್ ಕೂಡ್ಲು, ರತನ್ ಕುಮಾರ್ ಪಾಂಡಿ, ಶ್ಯಾಮ್ ಆಳ್ವ, ಪ್ರೊ.ಎ. ಶ್ರೀನಾಥ, ಅನಿತಾ ಟೀಚರ್, ಹರ್ಷ ಮಾಸ್ತರ್ ಬೆಳಿಂಜ, ಕೃಷ್ಣ ಡಿ ಬಿಳಿಂಜ, ಪ್ರತಿಭಾರಾಣಿ, ರಾಜೇಶ್ ಮಾಸ್ತರು ಉಬ್ರಂಗಳ, ಜನಜಾಗ್ರತಿ ಕರಾವಳಿ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ, ಜನಜಾಗೃತಿ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷ ಅಖಿಲೇಶ್ ನಗುಮುಗಂ, ಯೋಜನಾಧಿಕಾರಿ ದಿನೇಶ್, ನವಜೀವನ ಉತ್ಸವ ಸಮಿತಿಯ ಕಾರ್ಯದರ್ಶಿ ತಾರನಾಥ ರೈ, ಚಂದ್ರಶೇಖರ ಕುರುಪ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜನಜಾಗೃತಿ ತಾಲೂಕು ಅಧ್ಯಕ್ಷ ಜಯರಾಮ ಪಾಟಾಳಿ ಪಡುಮಲೆ ಅಧ್ಯಕ್ಷತೆ ವಹಿಸಿದ್ದರು ಉತ್ಸವ ಸಮಿತಿ ಅಧ್ಯಕ್ಷ ಹರೀಶ್ ಗೋಸಡ ಸ್ವಾಗತಿಸಿ, ಕೋಶಾಧಿಕಾರಿ ರಮೇಶ್ ಮಾವಿನಕಟ್ಟೆ ವಂದಿಸಿದರು. ಉದಯ ಕಲ್ಲಕಟ್ಟ ಮತ್ತು ಅಮೃತರಾಜ್ ಮರತಿಲ ಕಾರ್ಯಕ್ರಮ ನಿರೂಪಿಸಿದರು. ಶಂಭಾವಿ ಚಂದ್ರಹಾಸ ಶೆಟ್ಟಿ ಎಡಪಾಡಿಯವರ ಜನ್ನ ಮತ್ತು ಖಾಜಾ ಎಂಬೆರಡು ಕಂಬಳದ ಕೋಣಗಳು ಗದ್ದೆಯಲ್ಲಿ ಓಡಿಸಿ ಕಣ್ಮನ ಸೆಳೆಯಿತು.

.jpg)
.jpg)
