ಕಾಸರಗೋಡು: ವಿಶ್ವ ಹಿಂದೂ ಪರಿಷತ್(ವಿಎಚ್‍ಪಿ) ಕಾಸರಗೋಡು ಪ್ರಖಂಡ ವಾರ್ಷಿಕ ಬೈಠಕ್ ಸಮಾವೇಶ ಜುಲೈ 19ರಂದು ಸಂಜೆ 3ಕ್ಕೆ ಕೋಟೆಕಣಿ ರಾಮನಗರದ ರಾಮನಾಥ ಸಾಂಸ್ಕøತಿಕ ಭವನದಲ್ಲಿ ಜರುಗಲಿದೆ.
ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಕಾಸರಗೋಡು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜರುಗಿತು. ವಿಎಚ್‍ಪಿ ಜಿಲ್ಲಾಧ್ಯಕ್ಷ ಜಯದೇವ ಖಂಡಿಗೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಶಿವರಾಮ್ ಭಟ್, ವಿಎಚ್ ಪಿ ಕಣ್ಣೂರು ವಿಭಾಗ ಪ್ರಮುಖ್ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ವಿ ಎಚ್ ಪಿ ಕಾಸರಗೋಡು ಪ್ರಖಂಡ ಗೌರವಾಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ಅಧ್ಯಕ್ಷ ಗುರುಪ್ರಸಾದ್ ಕೋಟೆಕಣಿ, ಮೊಗ್ರಾಲ್ ಪುತ್ತೂರು ಸಮಿತಿಯಡಾ. ಗಣೇಶ್ ಚೌಕಿ, ಪ್ರಖಂಡ ಉಪಾಧ್ಯಕ್ಷ ಗುಣಪಾಲ ಅಮೈ, ಹಿರಿಯ ಕಾರ್ಯಕರ್ತ ಲಕ್ಷ್ಮೀಕಾಂತ ನೆಲ್ಲಿಕುಂಜೆ, ಕಾಸರಗೋಡು ಪ್ರಖಂಡ ಉಪಾಧ್ಯಕ್ಷ ಕೆ.ಎನ್. ರಾಮಕೃಷ್ಣ ಹೊಳ್ಳ, ಕಾರ್ಯದರ್ಶಿಗಳಾದ ಕಿಶೋರ್ ಕುಮಾರ್ ಎಸ್ ವಿ ಟಿ, ವಸಂತ್ ಕೆರೆಮನೆ ಉಪಸ್ಥಿತರಿದ್ದರು.


