ಮಂಜೇಶ್ವರ: ಧಾರಾಕಾರ ಮಳೆಗೆ ಬಂಗ್ರಮಂಜೇಶ್ವರದಲ್ಲಿ ಗುಡ್ಡೆ ಕುಸಿದು ಬಾವಿ ಮುಚ್ಚುಗಡೆಗೊಂಡಿದೆ. ಇದೇ ವೇಳೆ ಮಣ್ಣು ಕುಸಿದುಬಿದ್ದು ಮನೆಗೂ ಹಾನಿ ಸಂಭವಿಸಿದೆ. ಕನಿಲ ಭಂಡಾರ ನಿಲಯದ ಪುರುಷೋತ್ತಮ ಎಂಬವರ ಮನೆಗೆ ಸಮೀಪದ ಗುಡ್ಡೆ ಕುಸಿದುಬಿದ್ದಿದೆ.
ಗುಡ್ಡೆ ಕುಸಿದುಬಿದ್ದು ಮನೆ ಮುಂಭಾಗದಲ್ಲಿರುವ ಬಾವಿ ಪೂರ್ಣವಾಗಿ ಮುಚ್ಚುಗಡೆಗೊಂಡಿದೆ. ಶನಿವಾರ ಮುಂಜಾನೆ ಗುಡ್ಡೆ ಕುಸಿದು ಮನೆಮೇಲೆ ಬಿದ್ದು ಅಡುಗೆಕೋಣೆಗೆ ಹಾನಿ ಸಂಭವಿಸಿದೆ. ಇದರಿಂದ ಎಂಟು ಮಂದಿಯ ಕುಟುಂಬವನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದ. ಇದೇ ವೇಳೆ ಸಮೀಪದ ಇತರ ಮನೆಗಳೂ ಗುಡ್ಡೆ ಕುಸಿತದಿಂದ ಅಪಾಯ ಭೀತಿ ಎದುರಿಸುತ್ತಿವೆ. ಘಟನೆ ಸ್ಥಳಕ್ಕೆ ಪಂಚಾಯತಿ ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿದರು.

.jpg)
