HEALTH TIPS

ಲಯನ್ಸ್‍ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ಪೇಪರ್ ಬ್ಯಾಗ್ ತಯಾರಿ ತರಬೇತಿ

ಕಾಸರಗೋಡು: ಲಯನ್ಸ್ ಕ್ಲಬ್ ವಿದ್ಯಾನಗರ ವತಿಯಿಂದ ಪ್ರೌಢಶಾಲೆ ಮತ್ತು ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿಗಳಿಗಾಗಿ ಕಾಗದದ ಚೀಲ ತಯಾರಿಸುವ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ವಿವಿಧ ಶಾಲೆಗಳ ಮೂವತ್ತೈದು ಮಂದಿ ವಿದ್ಯಾರ್ಥಿಗಳು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 


ಕಾಸರಗೋಡಿನ ಸರ್ಕಾರಿ ಕಾಲೇಜಿನ ಉಪನ್ಯಾಸಕ ಡಾ. ಎ.ಎನ್. ಮನೋಹರನ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿದರು. ವಿದ್ಯಾನಗರ ಲಯನ್ಸ್ ಕ್ಲಬ್‍ನ ಅಧ್ಯಕ್ಷ ಟಿ.ಕೆ. ವಿಜಯಕುಮಾರ್  ಅಧ್ಯಕ್ಷತೆ ವಹಿಸಿದ್ದರು.   ನಿವೃತ್ತ ಮುಖ್ಯೋಪಾಧ್ಯಾಯ ಪಿ.ಟಿ. ಬೆನ್ನಿ ಅವರು ಮಕ್ಕಳಿಗೆ ಕಾಗದದ ಚೀಲ ತಯಾರಿಕೆಯ ಬಗ್ಗೆ ಮಾಹಿತಿ ನೀಡಿದರು.  ಕ್ಲಬ್ ಸದಸ್ಯರಾದ ಪಿ.ಕೆ. ಪ್ರಕಾಶ್ ಕುಮಾರ್, ಮಧು ಕೆ, ಎಂಎ ನಾಸರ್, ವಕೀಲ ಉಣ್ಣಿಕೃಷ್ಣನ್, ಸುಲೇಖಾ ಮಾಹಿನ್ ಉಪಸ್ಥಿತರಿದ್ದರು. ಕ್ಲಬ್ ಕಾರ್ಯದರ್ಶಿ ಸಿ. ಪದ್ಮನಾಭನ್ ಸ್ವಾಗತಿಸಿದರು. ಕ್ಲಬ್‍ನ ಕೋಶಾಧಿಕಾರಿ ಟಿ.ವಿ. ವಿನೋದ್ ಕುಮಾರ್ ವಂದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries