ಕಾಸರಗೋಡು: ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ತೆಲಂಗಾಣ ಸರ್ಕಾರದ ಭಾಷಾ ಮತ್ತು ಸಾಂಸ್ಕøತಿಕ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹೈದರಾಬಾದ್‍ನ ರವೀಂದ್ರ ಭಾರತಿಯಲ್ಲಿ ನಡೆದ ಸೌತ್ ಇಂಡಿಯನ್ ಯಂಗ್ ರೈಟರ್ಸ್ ಫೆಸ್ಟಿವಲ್-2026ರಲ್ಲಿ ಕಾಸರಗೋಡಿನ ಕನ್ನಡ ಕವಯತ್ರಿ ಲಕ್ಷ್ಮಿ ಕೆ. ಭಾಗವಹಿಸಿ ವಿಶೇಷ ಗೌರವಕ್ಕೆ ಪಾತ್ರರಾದರು.
ಕಾಸರಗೋಡಿನ ಪ್ರತಿನಿಧಿಯಾಗಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಅವರು, ಪೆÇಯೆಟ್ರಿ ರೀಡಿಂಗ್ ಅಧಿವೇಶನದಲ್ಲಿ ಕನ್ನಡವನ್ನು ಪ್ರತಿನಿಧಿಸಿ ತಮ್ಮ ಕವಿತೆ ವಾಚಿಸಿದರು. ಇದೇ ಅಧಿವೇಶನದ ಅಧ್ಯಕ್ಷತೆಯನ್ನೂ ಲಕ್ಷ್ಮಿ ಕೆ. ಅವರು ವಹಿಸಿ, ದಕ್ಷಿಣ ಭಾರತದ ವಿವಿಧ ಭಾಷೆಗಳ ಯುವ ಕವಿಗಳ ಕವನ ವಾಚನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು.


