ಕಾಸರಗೋಡು: ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಯುವತಿಯನ್ನು ದೂಡಿಹಾಕಿ ಆಕೆಯ ಕತ್ತಿನಿಂದ ಮೂರು ಪವನಿನ ಚಿನ್ನದ ಸರ ಎಗರಿಸಿ ಪರಾರಿಯಾದ ಇಬ್ಬರು ಆರೋಪಿಗಳನ್ನು ಹೊಸದುರ್ಗ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಕೊಯಿಲಾಂಡಿ ಮಾವಿಲೆಕಂಡಿ ಹೌಸ್‍ನ ಸೂರ್ಯನ್ (26) ಹಾಗೂ ತಾಮರಶ್ಶೇರಿ ನಿವಾಸಿ ಅನಸ್ ಯಾನೆ ರಂಬುಟನ್ ಅನಸ್ (29) ಬಂಧಿತರು.
ಇದೇ ಆರೋಪಿಗಳು ಕಣ್ಣೂರು ಮಟ್ಟನ್ನೂರು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲೂ ಸರಕಸಿಯುವ ಕೃತ್ಯದಲ್ಲಿ ಶಾಮೀಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮಟ್ಟನ್ನೂರು ಪೆÇಲೀಸರು ಇವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾಗ ಹೊಸದುರ್ಗ ಪೆÇಲೀಸ್ ಠಾಣೆ ವ್ಯಾಪ್ತಿಯ ಯುವತಿಯ ಕತ್ತಿನಿಂದ ಚಿನ್ನದ ಸರ ಎಗರಿಸಿದ ವಿಷಯ ಬೆಳಕಿಗೆ ಬಂದಿತ್ತು. ಹೊಸದುರ್ಗ ಪೆÇಲೀಸರು ಮಟ್ಟನ್ನೂರಿಗೆ ತೆರಳಿ ಆರೋಪಿಗಳ ಬಂಧನ ದಾಖಲಿಸಿದ್ದಾರೆ. ಹೊಸದುರ್ಗ ಸಮೀಪದ ಮಾವುಂಗಾಲ್ ನೆಲ್ಲಿತ್ತರ ಪ್ರದೇಶದ ಪಿ.ಸಿಂಧು ಎಂಬಾಕೆ ಇತ್ತೀಚೆಗೆ ಹೊಸದುರ್ಗದಿಂದ ದ್ವಿಚಕ್ರವಾಹನದಲ್ಲಿ ಮನೆಗೆ ಮರಳುತ್ತಿದ್ದ ವೇಳೆ ಅವರನ್ನು ಈ ಇಬ್ಬರು ಆರೋಪಿಗಳು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿ ದಾರಿ ಮಧ್ಯೆ ಮಾವುಂಗಾಲ್ ನಲ್ಲಿ ತಡೆದು ನಿಲ್ಲಿಸಿ ಸಿಂಧು ಅವರನ್ನು ವಾಹನದಿಂದ ಕೆಳಗೆ ಬೀಳಿಸಿ ಬಳಿಕ ಅವರ ಕತ್ತಿನಲ್ಲಿದ್ದ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದರು. ಆರೋಪಿಗಳು ಸಂಚರಿಸಿದ ಸಿಸಿ ಕ್ಯಾಮರಾ ಪರಿಶೀಲಿಸಿ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿತ್ತು.

