ಕಾಸರಗೋಡು: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಷಷ್ಠ ಚಾತುರ್ಮಾಸ್ಯ ಜುಲೈ 29 ರಿಂದ ಸೆಪ್ಟೆಂಬರ್ 26ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಶ್ರೀಮಠದಲ್ಲಿ ನಡೆಯಲಿದೆ. ಒಟ್ಟು 60 ದಿನಗಳ ಈ ಪುಣ್ಯ ಕಾರ್ಯದಲ್ಲಿ ಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆಯು, ಧಾರ್ಮಿಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ, ಭಜನೆ,ಕಲೆ- ಸಾಹಿತ್ಯ, ಸಂಗೀತದ ಹಿರಿಯ ಕಿರಿಯ ಕಲಾವಿದರ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಲಿದೆ.
ಈ ಸಂದರ್ಭ ಸಾವಿರಾರು ಭಕ್ತಾದಿಗಳ ಶ್ರೀಮಠ ಸಂದರ್ಶನ, ಆಗಮಿಸುವ ಭಕ್ತಾದಿಗಳಿಗಿರುವ ಪ್ರತಿದಿನದ ಊಟೋಪಚಾರ, ವಸತಿ ವ್ಯವಸ್ಥೆಗಳೆಲ್ಲವೂ ಶ್ರೀ ಮಠದ ಶಿಷ್ಯವೃಂದದ ಸಹಕಾರದೊಂದಿಗೆ ನಡೆಸಬೇಕಾಗಿದೆ. ಈ ಬಗ್ಗೆ ಚರ್ಚೆ ಮಾಡಿ ತೀರ್ಮಾನಿಸುವ ನಿಟ್ಟಿನಲ್ಲಿ ಜುಲೈ 19 ಸಂಜೆ 5ಕ್ಕೆ ಶ್ರೀ ಎಡನೀರು ಮಠದಲ್ಲಿ ಎಲ್ಲಾ ಸಮಿತಿಗಳ ಮಹಾಸಭೆ ನಡೆಯಲಿದ್ದು, ಶಿಷ್ಯವೃಂದದವರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಎಡನೀರು ಶ್ರೀಗಳ ಚಾತುರ್ಮಾಸ್ಯ ಸಮಿತಿ ಪ್ರಕಟಣೆ ತಿಳಿಸಿದೆ.

