ಕುಂಬಳೆ: ಕಾರಿನಲ್ಲಿ ಸಾಗಿಸುತ್ತಿದ್ದ 31 ಕೆಜಿ ಗಾಂಜಾ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಕುಂಬಳೆ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಕಾಞಂಗಾಡ್ ಅಧಿಞËಲ್ ತೆಕ್ಕೇಪುರ ನಿವಾಸಿ ಟಿ.ಎಂ. ಶಮೀರ್ (40), ನೀಲೇಶ್ವರ ಬಂಗಳಂ ಸೆಂಚುರಿ ಹೌಸ್‍ನ ಟಿ. ಶಂಸೀರ್ (32) ಬಂಧಿತರು. ಕುಂಬಳೆ ಠಾಣೆ ಪೆÇಲೀಸ್ ಇನ್‍ಸ್ಪೆಕ್ಟರ್ ಬೈಜು ಕೆ ಜೋಸ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ.
ಜುಲೈ 4ರಂದು ಕುಂಬಳೆ ಆರಿಕ್ಕಾಡಿ ಟೋಲ್ ಪ್ಲಾಸಾ ಸನಿಹ ಕುಂಬಳೆ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಹೋಡಾ ಸಿಟಿ ಕಾರಿನಲ್ಲಿ ಸಾಗಿಸುತ್ತಿದ್ದ 31ಕಿ.ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿ ಬೇಕಲ ಪಳ್ಳಿಕೆರೆ ಬಿಲಾಲ್‍ನಗರದ ಕಬೀರ್ ಯಾನೆ ಲಾಲಾ ಕಬೀರ್ ಹಾಗೂ ಕಾಞಂಗಾಡು ಕೊವ್ವಲ್ ಆವಿಕ್ಕರ ನಿವಾಸಿ ಮೊಹಮ್ಮದ್ ಮಿರ್ಶಾನ್(34) ಎಂಬವರನ್ನು ಬಂಧಿಸಿದ್ದರು. ನಂತರ ನ್ಯಾಯಾಂಗ ಬಂಧನದಿಂದ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದಾಗ ಮತ್ತೆ ಇಬ್ಬರು ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದರು.



