HEALTH TIPS

ನಾಸಿಕ್‌ನ ತ್ರಯಂಬಕೇಶ್ವರದಲ್ಲಿ ಪುರಾತನ ಶಿವಲಿಂಗ ಪತ್ತೆ

 ಮುಂಬೈ: ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ ತ್ರಯಂಬಕೇಶ್ವರ ದೇಗುಲದ ಪ್ರಾಂಗಣದಲ್ಲಿರುವ ಅಮೃತ್‌ ಕುಂಡದಲ್ಲಿ (ಪುಷ್ಕರಣಿ) ಶತಮಾನಗಳಷ್ಟು ಪುರಾತನದ್ದು ಎನ್ನಲಾದ ಸುಂದರ ಶಿವಲಿಂಗ ಪತ್ತೆಯಾಗಿದೆ. 


ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್‌ಐ) ಕೈಗೆತ್ತಿಕೊಂಡಿದ್ದ ಕಲ್ಯಾಣಿಯ ಸ್ವಚ್ಛತೆ ಮತ್ತು ಪುನಶ್ಚೇತನ ಕಾರ್ಯದ ವೇಳೆ ಶಿವಲಿಂಗ ಪತ್ತೆಯಾಗಿದೆ ಎಂದು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ನವದೆಹಲಿಯ ಎಎಸ್‌ಐ ಕೇಂದ್ರ ಕಚೇರಿಯು ದೃಢಪಡಿಸಿದೆ.

'ನಾಸಿಕ್‌ನಲ್ಲಿ ಶತಮಾನಗಳಷ್ಟು ಹಳೆಯ ಇತಿಹಾಸ ತೆರೆದುಕೊಂಡಿದೆ. 65 ಅಡಿ ಆಳದ ಅಮೃತ್‌ ಕುಂಡ್‌ನಲ್ಲಿ ಹೂಳು ತೆಗೆದು ಸ್ವಚ್ಛ ಮಾಡುವಾಗ ಪುರಾತನ ಶಿವಲಿಂಗ ಪತ್ತೆಯಾಗಿದೆ' ಎಂದು ಎಎಸ್‌ಐ ತಿಳಿಸಿದೆ.

ನಾಸಿಕ್‌ನಲ್ಲಿ ಹಿಂದೂಗಳ ಪವಿತ್ರ ಸಿಂಹಸ್ಥ ಕುಂಭಮೇಳಕ್ಕೆ ಲಕ್ಷಾಂತರ ಭಕ್ತರು ಆಗಮಿಸಲಿರುವ ಸಂದರ್ಭದಲ್ಲಿ ಶಿವಲಿಂಗ ಗೋಚರ ಆಗಿರುವುದು ಸಂಚಲನ ಮೂಡಿಸಿದೆ.

ಈ ವರ್ಷದ ಅಕ್ಟೋಬರ್‌ 31ರಿಂದ ಸಿಂಹಸ್ಥ ಕುಂಭಮೇಳ ಆರಂಭವಾಗಲಿದೆ. 2027ರ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಮೂರು ಪುಣ್ಯ ಸ್ನಾನಗಳು ಜರುಗಲಿವೆ. 2028ರ ಜುಲೈಗೆ ಸಿಂಹಸ್ಥ ಕುಂಭಮೇಳದ ಕಾರ್ಯಕ್ರಮಗಳು ಅಂತ್ಯಗೊಳ್ಳಲಿವೆ.

12 ಜ್ಯೋತಿರ್ಲಿಂಗಗಳಲ್ಲಿ ತ್ರಯಂಬಕೇಶ್ವರವೂ ಒಂದು. ಬ್ರಹ್ಮ, ವಿಷ್ಣು ಮತ್ತು ಶಿವನ ಮುಖಗಳಿರುವ ಮೂರು ಮುಖಗಳ ತ್ರಿದೇವ್‌ ಮಾದರಿಯಲ್ಲಿ ದೇಗುಲದ ಲಿಂಗವಿದೆ.

17ನೇ ಶತಮಾನದ ಪೇಶ್ವೆ ಬಾಲಾಜಿ ಬಾಜಿರಾವ್‌, ಗೋದಾವರಿ ನದಿಯ ಮೂಲಸ್ಥಾನದಲ್ಲಿ ಈ ದೇಗುಲ ನಿರ್ಮಾಣ ಮಾಡಿಸಿದ್ದರು. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries