HEALTH TIPS

ಕಾಕ್ರೋಚ್ ಜನತಾ ಪಾರ್ಟಿ 'ಎಕ್ಸ್‌' ಖಾತೆ ಮೇಲಿನ ನಿರ್ಬಂಧ ತೆರವುಗೊಳಿಸಿದ ಹೈಕೋರ್ಟ್

ನವದೆಹಲಿ: ಕಾಕ್ರೋಚ್‌ ಜನತಾ ಪಾರ್ಟಿಯ (ಸಿಜೆಪಿ) 'ಎಕ್ಸ್‌' ಖಾತೆ ಮೇಲಿನ ನಿರ್ಬಂಧವನ್ನು ತೆರವುಗೊಳಿಸಿ ದೆಹಲಿ ಹೈಕೋರ್ಟ್‌ ಮಂಗಳವಾರ ಆದೇಶಿಸಿದೆ.

'ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯ (ನೀಟ್‌) ಸಂದರ್ಭದಲ್ಲಿ ಸಿಜೆಪಿ ಪಕ್ಷದ 'ಎಕ್ಸ್‌' ಖಾತೆಯಲ್ಲಿ ಮಾಡುತ್ತಿದ್ದ ಪೋಸ್ಟ್‌ಗಳು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಗೊಂದಲ ಉಂಟುಮಾಡಬಹುದು ಎಂಬ ಕಾರಣ ನೀಡಿ ಸರ್ಕಾರ ಖಾತೆಯನ್ನು ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಂಡಿತ್ತು' ಎಂದು ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದಾರೆ.

'ನೀಟ್ ಪರೀಕ್ಷೆ ಮುಗಿದಿರುವುದರಿಂದ ಕೇಂದ್ರ ಸರ್ಕಾರದ ಕ್ರಮ ಇನ್ನು ಮುಂದೆ ಪ್ರಸ್ತುತವಾಗಿರುವುದಿಲ್ಲ' ಎಂದು ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ನೇತೃತ್ವದ ಪೀಠವು ಅಭಿಪ್ರಾಯಪಟ್ಟಿದ್ದು, ಸಿಜೆಪಿ ಸಂಸ್ಥಾಪಕ ಅಭಿಜೀತ್‌ ದೀಪ್ಕೆ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿತು ಎಂದು 'ಲೈವ್ ಲಾ' ವೆಬ್‌ಸೈಟ್ ವರದಿ ಮಾಡಿದೆ.

ರಾಷ್ಟ್ರೀಯ ಭದ್ರತೆಯ ಕಾರಣಗಳನ್ನು ಉಲ್ಲೇಖಿಸಿ ಖಾತೆಯನ್ನು ನಿಷೇಧಿಸಿದ್ದ ಸರ್ಕಾರದ ಆದೇಶ ಪ್ರಶ್ನಿಸಿ ದಿಪ್ಕೆ ನ್ಯಾಯಾಲಯದ ಮೊರೆ ಹೋಗಿದ್ದರು.

ಸಿಜೆಪಿಯ 'ಎಕ್ಸ್‌' ಖಾತೆ ಮೇಲೆ ವಿಧಿಸಿರುವ ನಿರ್ಬಂಧವನ್ನು ತೆಗೆದು ಹಾಕುವ ಕುರಿತಂತೆ ಮಾಹಿತಿ ತಂತ್ರಜ್ಞಾನ ನಿಯಮಗಳಡಿ ರಚಿಸಿದ ಪರಿಶೀಲನಾ ಸಮಿತಿಯು ಪರಾಮರ್ಶೆ ನಡೆಸಿ, ಜುಲೈ 7ರ ಒಳಗಾಗಿ ನಿರ್ಧಾರ ಪ್ರಕಟಿಸಬೇಕು' ಎಂದು ಹೈಕೋರ್ಟ್‌ ಮೇ 29ರಂದು ಸೂಚಿಸಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries