HEALTH TIPS

'ದಾದಾ' ಸಿನಿಮಾದ ಮೊದಲ ಲುಕ್ ಬಿಡುಗಡೆ; ರಾಜ್‌ಕುಮಾರ್ ರಾವ್ ಕಂಡು ಭಾವುಕರಾದ ಗಂಗುಲಿ

 ಸೌರವ್ ಗಂಗುಲಿ ಅವರ 54ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರತಂಡ ಅವರ ಜೀವನಚರಿತ್ರೆಯ ಸಿನಿಮಾದ ಮೊದಲ ಪೋಸ್ಟರ್‌ ಬಿಡುಗಡೆ ಮಾಡಿದೆ.

ಭಾರತೀಯ ಕ್ರಿಕೆಟ್‌ ರಂಗದ ದಿಗ್ಗಜ ಆಟಗಾರ ಸೌರವ್ ಗಂಗುಲಿ ಅವರ ಜೀವನ ಆಧಾರಿತ 'ದಾದಾ: ದಿ ಸೌರವ್ ಗಂಗುಲಿ ಸ್ಟೋರಿ' ಚಿತ್ರದ ಮೊದಲ ಲುಕ್ ಬಿಡುಗಡೆಯಾಗಿದೆ. 


ಸೌರವ್ ಗಂಗುಲಿ ಅವರ 54ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರತಂಡ ಅವರ ಜೀವನಚರಿತ್ರೆಯ ಸಿನಿಮಾದ ಮೊದಲ ಪೋಸ್ಟರ್‌ ಬಿಡುಗಡೆ ಮಾಡಿದೆ. ರಾಜ್‌ಕುಮಾರ್ ರಾವ್ ಹಾಗೂ ಚಿತ್ರತಂಡ ಸೌರವ್ ಗಂಗುಲಿಗೆ ಹುಟ್ಟುಹಬ್ಬದ ಶುಭಾಶಯ ಕೋರುವ ಮೂಲಕ ಪೋಸ್ಟರ್‌ ಬಿಡುಗಡೆ ಮಾಡಿದೆ. ಸ್ವತಃ ಸೌರವ್ ಗಂಗುಲಿ ಅವರೂ ಸಿನಿಮಾದ ಪೋಸ್ಟರ್‌ ಬಿಡುಗಡೆ ಮಾಡಿದ್ದಾರೆ.

"ಎಂದೂ ಪಡೆಯದ ಅತ್ಯುತ್ತಮ ಉಡುಗೊರೆ ಇದು! ನನ್ನ ಕವರ್ ಡ್ರೈವ್ ಅನ್ನು ನೀವು ಆಡುವುದನ್ನು ನೋಡಲು ಕಾಯಲಾಗುತ್ತಿಲ್ಲ" ಎಂದು ಸೌರವ್ ಗಂಗುಲಿ ಬರೆದುಕೊಂಡಿದ್ದಾರೆ.

ಸಿನಿಮಾದಲ್ಲಿ ಬಾಲಿವುಡ್ ನಟ ರಾಜ್‌ಕುಮಾರ್ ರಾವ್, ಸೌರವ್ ಗಂಗುಲಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕಾಗಿ ಅವರು ಬಹಳ ಶ್ರಮ ಹಾಕಿದ್ದಾರೆ. ಸೌರವ್ ಅವರ ಲುಕ್, ಸ್ಟೈಲ್ ಹಾಗೂ ವಾಕ್ ಎಲ್ಲವನ್ನೂ ಕರಗತ ಮಾಡಿಕೊಂಡು ಸಿನಿಮಾಗೆ ಇಳಿದಿದ್ದಾರೆ.

ಬಿಡುಗಡೆಯಾದ ಮೊದಲ ಪೋಸ್ಟರ್‌ನಲ್ಲಿ ರಾಜ್‌ಕುಮಾರ್ ರಾವ್ ಲಾರ್ಡ್ಸ್‌ನ ಬಾಲ್ಕನಿಯಲ್ಲಿ ನಿಂತಿರುವುದು ಕಂಡುಬರುತ್ತದೆ. ಅವರು ಟೀಮ್ ಇಂಡಿಯಾದ ಜೆರ್ಸಿಯನ್ನು ಕೈಯಲ್ಲಿ ಎತ್ತಿ ಹಿಡಿದಿದ್ದಾರೆ. 2002ರಲ್ಲಿ ನ್ಯಾಟ್‌ವೆಸ್ಟ್ ಟ್ರೋಫಿಯ ಫೈನಲ್‌ ನಲ್ಲಿ ಭಾರತೀಯ ತಂಡ ಇಂಗ್ಲೆಂಡ್ ತಂಡವನ್ನು ಸೋಲಿಸಿದ ಬಳಿಕ ಸೌರವ್ ಗಂಗುಲಿ ಲಾರ್ಡ್ಸ್‌ ನ ಬಾಲ್ಕನಿಯಲ್ಲಿ ಹೀಗೆ ತಮ್ಮ ಜೆರ್ಸಿಯನ್ನು ತೆಗೆದ ಐತಿಹಾಸಿಕ ಕ್ಷಣ ಇದಾಗಿದೆ. ಈ ಕ್ಷಣವನ್ನು ಭಾರತೀಯ ಕ್ರಿಕೆಟ್‌ನ ಹೊಸ ಹಾಗೂ ಆಕ್ರಮಣಕಾರಿ ಯುಗದ ಆರಂಭವೆಂದು ಪರಿಗಣಿಸಲಾಗಿದೆ.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries