ಕಾಸರಗೋಡು: ಇತಿಹಾಸ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ರಾಜಾಂಗಣದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ 71 ನೇ ವರುಷದ ಶ್ರೀ ಗಣೇಶೋತ್ಸವದಲ್ಲಿ ಪೂಜಿಸಲ್ಪಡುವ ಗಣಪತಿ ವಿಗ್ರಹ ತಯಾರಿ ಪ್ರಾರಂಭ ಮುಹೂರ್ತ ಕಾಸರಗೋಡು ಉಳಿಯತ್ತಡ್ಕ ಬ್ರಹ್ಮಶ್ರೀ ಕೇಶವ ಆಚಾರ್ಯ ಅವರ ನಿವಾಸದಲ್ಲಿ ಆಚಾರ್ಯರ ಕಾರ್ಮಿಕತ್ವದಲ್ಲಿ ನೆರವೇರಿತು.
ಈ ಶುಭ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಜಗನ್ನಾಥ್ ವಿಟ್ಲ, ಅಧ್ಯಕ್ಷರಾದ ಸತೀಶ್ ಕಾಮತ್, ಪ್ರಧಾನ ಕಾರ್ಯದರ್ಶಿ ಪ್ರಮೋದ್ ಕುಮಾರ್ ಕೆ.ಆರ್, ಕೋಶಾಧಿಕಾರಿ ಉಪೇಂದ್ರ ಆಚಾರ್ಯ, ಗಣೇಶೋತ್ಸವ ಸಮಿತಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಕಮಲಾಕ್ಷನ್ ಕೆ.ಎನ್, ಟ್ರಸ್ಟ್ ಖಜಾಂಜಿ ಸಂದೀಪ್ ಭಟ್, ಸಮಿತಿಯ ಸದಸ್ಯರಾದ ಕೆ.ಎನ್. ವೆಂಕಟ್ರಮಣ ಹೊಳ್ಳ, ಸೂರಜ್ ಅಣಂಗೂರು, ಲಕ್ಷ್ಮೀಕಾಂತ ನೆಲ್ಲಿಕುಂಜೆ, ಉಮೇಶ್ ನೆಲ್ಲಿಕುಂಜೆ, ಮೋಹನ್ ರಾಜ್ ಕೊರಕ್ಕೋಡು, ಸತ್ಯಸಾಯಿ ಎಸ್.ವಿ.ಟಿ, ಕುಸುಮಾಕರ ಕೊರಕ್ಕೋಡು, ಅಶೋಕ ಬಟ್ಟಂಪಾರೆ, ಮನೋಹರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.



