ಕಾಸರಗೋಡು: ವಿಶ್ವ ಹಿಂದೂ ಪರಿಷತ್ ಕಾಸರಗೋಡು ಪ್ರಖಂಡ ಸಮಿತಿಯ ಆಶ್ರಯದಲ್ಲಿ ರಾಮಾಯಣ ಮಸಾಚರಣೆಯ ಅಂಗವಾಗಿ ಒಂದು ತಿಂಗಳ ಪರ್ಯಂತ ಮನೆ ಮನೆ ಭಜನಾ ಸಂಕೀರ್ತಾನಾ ಯಾನ ಕಾರ್ಯಕ್ರಮ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನ ಪರಿಸರದ ನಗರದ ಹಿರಿಯ ಭಜಕರಾದ ಶ್ರೀ ಸರ್ವೋತ್ತಮ ಕಾಮತ್ ಅವರ ನಿವಾಸದಲ್ಲಿ ಕಾಮತರು ದಂಪತಿ ಸಹಿತ ದೀಪ ಪ್ರಜ್ವಲಿಸಿ ಭಜನಾ ಸಂಕೀರ್ತನೆಗೆ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಕಾಸರಗೋಡು ಪ್ರಖಂಡ ಗೌರವಾಧ್ಯಕ್ಷ ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ, ಉಪಾಧ್ಯಕ್ಷ ಕೆ. ಎನ್. ರಾಮಕೃಷ್ಣ ಹೊಳ್ಳ, ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಕಾಸರಗೋಡು ತಾಲೂಕು ಗೌರವಾಧ್ಯಕ್ಷ ಹರಿದಾಸ ಶ್ರೀ ಜಯಾನಂದ ಹೊಸದುರ್ಗ , ಹಿರಿಯ ಕಾರ್ಯಕರ್ತ ಲಕ್ಮೀಕಾಂತ್ ನೆಲ್ಲಿಕುಂಜೆ, ವಿ ಎಚ್ ಪಿ ಪ್ರಖಂಡ ಕಾರ್ಯದರ್ಶಿಗಳಾದ ಕಿಶೋರ್ ಎಸ್ ವಿ ಟಿ, ವಸಂತ್ ಕೆರೆಮನೆ, ವಿ ಎಚ್ ಪಿ ಮಾತೃ ಸಮಿತಿಯ ಶ್ರೀಮತಿ ಶ್ರೀಲತಾ ಟೀಚರ್ , ಶಾರದಾ ರಾವ್, ಶ್ರೀದೀವಿ, ಪೇಮ, ಶ್ರೀವಳ್ಳಿ, ವಿಜಯ ಶೆಟ್ಟಿ, ಸೌಮ್ಯ, ಶ್ವೇತಾ, ಗೀತಾ, ಸವಿತಾ ವೆಂಕಟ್ರಮಣ ಬಾಲಗೋಕುಲದ ಶಿಕ್ಷಕಿಯರಾದ ಅದತಿ, ಅನುಶ್ರೀ ಹಾಗೂ ಮಕ್ಕಳು ಭಾಗವಹಿಸಿದರು. ಪಕ್ಕವಾದ್ಯ ಹಾರ್ಮೋನಿಯಂ ನಲ್ಲಿ ಹಿರಿಯ ಭಜಕರಾದ ತುಕಾರಾಮ ಆಚಾರ್ಯ ಕೆರೆಮನೆ, ತಬಲಾದಲ್ಲಿ ಕೇತನ್, ಮನ್ವಿತ್, ಮಾಸ್ಟರ್ ತೃಷನ್ ಸಹಕರಿಸಿದರು. ಮಂಗಳಾರತಿಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.



