HEALTH TIPS

ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್ ತಂಗಿದ್ದ ಹೋಟೆಲ್‌ ಬಳಿ ಸ್ಫೋಟ: ನಾಲ್ವರಿಗೆ ಗಾಯ

 ಡಮಾಸ್ಕಸ್: ಸಿರಿಯಾ ಭೇಟಿಯಲ್ಲಿರುವ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಡಮಾಸ್ಕಸ್‌ನಲ್ಲಿ ತಂಗಿದ್ದ ಹೋಟೆಲ್‌ ಬಳಿ ಮಂಗಳವಾರ ಸ್ಫೋಟ ಸಂಭವಿಸಿದ್ದು, ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ.


ಮ್ಯಾಕ್ರನ್‌ ಅವರು ಸಿರಿಯಾ ಅಧ್ಯಕ್ಷ ಅಹ್ಮದ್‌ ಅಲ್‌ ಶರಾ ಅವರನ್ನು ಭೇಟಿಯಾಗಲು ಅಧ್ಯಕ್ಷರ ಅರಮನೆಗೆ ಪ್ರವೇಶಿಸಿದ ಕೆಲವೇ ಹೊತ್ತಿನಲ್ಲಿ 'ಫೋರ್‌ ಸೀಸನ್‌' ಹೋಟೆಲ್‌ ಬಳಿ ಸ್ಫೋಟ ಸಂಭವಿಸಿದೆ ಎಂದು ಸಿರಿಯಾದ ಸರ್ಕಾರಿ ಸ್ವಾಮ್ಯದ ಸುದ್ದಿವಾಹಿನಿ ವರದಿ ಮಾಡಿದೆ.

ಮ್ಯಾಕ್ರನ್‌ ಅವರು 'ಫೋರ್ ಸೀಸನ್' ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು ಎಂದು ಸಿರಿಯಾದ ಮಾಧ್ಯಮಗಳು ವರದಿ ಮಾಡಿವೆ. 'ಮ್ಯಾಕ್ರನ್‌ ಅವರು ಸುರಕ್ಷಿತವಾಗಿದ್ದಾರೆ ಮತ್ತು ಶರಾ ಅವರೊಂದಿಗಿನ ಭೇಟಿ ನಿಗದಿಯಂತೆ ನಡೆದಿದೆ' ಎಂದು ಫ್ರಾನ್ಸ್‌ ಅಧ್ಯಕ್ಷರ ಕಚೇರಿ ತಿಳಿಸಿದೆ.

ಅಲ್‌ ಶರಾ ಅವರು ಅಧಿಕಾರಕ್ಕೆ ಬಂದ ನಂತರ ಸಿರಿಯಾಕ್ಕೆ ಭೇಟಿ ನೀಡಿದ ಪ್ರಮುಖ ಪಾಶ್ಚಿಮಾತ್ಯ ನಾಯಕ ಮ್ಯಾಕ್ರನ್ ಆಗಿದ್ದಾರೆ. ಟರ್ಕಿಯ ಅಂಕಾರಾದಲ್ಲಿ ನಡೆಯಲಿರುವ ನ್ಯಾಟೊ ಶೃಂಗಸಭೆಗೆ ತೆರಳುವ ಮೊದಲು ಅವರು ಡಮಾಸ್ಕಸ್‌ಗೆ ಭೇಟಿ ನೀಡಿದ್ದಾರೆ.

ರಾಜಧಾನಿಯ ಹೃದಯ ಭಾಗದಲ್ಲಿ ಎರಡು ಸ್ಫೋಟಗಳು ಸಂಭವಿಸಿವೆ ಎಂದು ಹೆಸರು ಬಹಿರಂಗಪಡಿಸದ ಭದ್ರತಾ ಅಧಿಕಾರಿಯನ್ನು ಉಲ್ಲೇಖಿಸಿ ಸರ್ಕಾರಿ ಸುದ್ದಿವಾಹಿನಿ ವರದಿ ಮಾಡಿದೆ. ಸ್ಫೋಟಕಗಳನ್ನು ಕಸದ ತೊಟ್ಟಿ ಹಾಗೂ ಹೋಟೆಲ್‌ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಇಡಲಾಗಿತ್ತು. 'ಪೊಲೀಸ್‌ ಅಧಿಕಾರಿಗಳು ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಯಾವುದೇ ಸಾವು ವರದಿಯಾಗಿಲ್ಲ.

ಸ್ಫೋಟದ ಪರಿಣಾಮ ಸ್ಥಳದಲ್ಲಿ ಬೆಂಕಿ ಹಾಗೂ ದಟ್ಟ ಹೊಗೆ ಕಾಣಿಸಿಕೊಂಡಿದೆ. ಪ್ರವಾಸೋದ್ಯಮ ಸಚಿವಾಲಯದ ಕಚೇರಿ ಮತ್ತು ಡಮಾಸ್ಕಸ್‌ ರಾಷ್ಡ್ರೀಯ ವಸ್ತು ಸಂಗ್ರಹಾಲಯ ಇರುವ ಜನನಿಬಿಡ ರಸ್ತೆಯಲ್ಲೇ ಸ್ಫೋಟ ಸಂಭವಿಸಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries