ಬದಿಯಡ್ಕ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾಸರಗೋಡು ಇವರ ಆಶ್ರಯದಲ್ಲಿ ಶುಕ್ರವಾರ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ `ಅಂತರರಾಷ್ಟ್ರೀಯ ನ್ಯಾಯ ದಿನಾಚರಣೆ'ಯ ಅಂಗವಾಗಿ ಹಿರಿಯ ಪ್ರಾಥಮಿಕ/ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಾಗೃತಿ ತರಗತಿಯನ್ನು ಹಮ್ಮಿಕೊಳ್ಳಲಾಯಿತು. ಪ್ರಾಂಶುಪಾಲ ಸುಬ್ರಮಣ್ಯನ್ ಎಂ. ಉದ್ಘಾಟಿಸಿದರು. ಶಾಲೆಯ ಸಿಬ್ಬಂದಿ ಕಾರ್ಯದರ್ಶಿ ಗಾಯತ್ರಿ ಎ. ಸ್ವಾಗತಿಸಿದರು. ಕಾಸರಗೋಡಿನ ನ್ಯಾಯವಾದಿ ಸುಚಿತ್ರಾ ಕೆ. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಅಂತರರಾಷ್ಟ್ರೀಯ ನ್ಯಾಯದ ಮಹತ್ವ ಮತ್ತು ಅದರ ಕಾರ್ಯವಿಧಾನಗಳ ಬಗ್ಗೆ ಜಾಗೃತಿ ತರಗತಿ ನಡೆಸಿಕೊಟ್ಟರು. ಕಾಸರಗೋಡು ಡಿ.ಎಲ್.ಎಸ್.ಎ ಪ್ಯಾರಾ ಲೀಗಲ್ ವಾಲಂಟಿಯರ್ ಕೃಷ್ಣವೇಣಿ ಕಾರ್ಯಕ್ರಮವನ್ನು ಸಂಯೋಜಿಸಿದರು. ಶಾಲಾ ಎನ್.ಎಸ್.ಎಸ್ ಕಾರ್ಯನಿರ್ವಹಣಾಕಾರಿ ಹರೀಶ ಪಟಾಳಿ ಬಿ. ವಂದಿಸಿದರು. 97 ವಿದ್ಯಾರ್ಥಿಗಳು ಹಾಗೂ 3 ಮಂದಿ ಶಿಕ್ಷಕರು ಸಕ್ರಿಯವಾಗಿ ಭಾಗವಹಿಸಿದ್ದರು.

.jpg)
