HEALTH TIPS

ಔಷಧದಲ್ಲಿ ಅಧಿಕ ಈಥೈಲ್ ಆಲ್ಕೋಹಾಲ್: ಪರವಾನಗಿ ಕಡ್ಡಾಯ

 ನವದೆಹಲಿ (PTI): ಶೇಕಡ 12ಕ್ಕಿಂತ ಹೆಚ್ಚು ಪ್ರಮಾಣದ ಈಥೈಲ್ ಆಲ್ಕೋಹಾಲ್ ಹೊಂದಿರುವ ಔಷಧಗಳಿಗೆ ನೀಡಿರುವ ಪರವಾನಗಿ ವಿನಾಯಿತಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ.

ಈ ಔಷಧಗಳಿಗೂ ಕಡ್ಡಾಯ ಪರವಾನಗಿ ಪಡೆಯಬೇಕು, ವೈದ್ಯರ ಚೀಟಿ ಇಲ್ಲದೇ ಮಾರಾಟ ಮಾಡುವಂತಿಲ್ಲ ಎಂಬ ನಿಯಮಗಳು ಅನ್ವಯವಾಗಲಿವೆ. 


'ಏಲಕ್ಕಿ ಮತ್ತು ಶುಂಠಿ ಟಿಂಚರ್ ಸೇರಿದಂತೆ ಹಲವು ಔಷಧಗಳಿಗೆ 'ಔಷಧ ನಿಯಮ 1945'ರ ಅನೂಸೂಚಿ 'ಕೆ' ಅಡಿಯಲ್ಲಿ ಪರವಾನಗಿಯಿಂದ ವಿನಾಯಿತಿ ನೀಡಲಾಗಿತ್ತು. ಈ ಔಷಧಗಳು ಅಧಿಕ ಪ್ರಮಾಣದಲ್ಲಿ ಈಥೈಲ್ ಆಲ್ಕೋಹಾಲ್ ಅನ್ನು ಹೊಂದಿರುವುದರಿಂದ ಮಾದಕವಸ್ತುಗಳ ರೀತಿಯಲ್ಲಿ ದುರ್ಬಳಕೆಯಾಗುತ್ತಿವೆ' ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

'ಈ ಅಂಶಗಳನ್ನು ಪರಿಗಣಿಸಿ, ಶೇ 12ಕ್ಕಿಂತ ಅಧಿಕ ಈಥೈಲ್ ಆಲ್ಕೋಹಾಲ್ ಹೊಂದಿರುವ 30 ಮಿ.ಲೀಗಿಂತ ಹೆಚ್ಚು ಪ್ರಮಾಣದ ಔಷಧಗಳಿಗೆ 'ಔಷಧ ಮತ್ತು ಸೌಂದರ್ಯವರ್ಧಕಗಳ ಕಾಯ್ದೆ 1940'ರ ಅಡಿಯಲ್ಲಿ ಪರವಾನಗಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ' ಎಂದು ಹೇಳಿದೆ.

'ಔಷಧ ದುರ್ಬಳಕೆ ಬಗ್ಗೆ ಕೆಲವು ರಾಜ್ಯಗಳಿಂದ ಮಾಹಿತಿ ಪಡೆದು, ನಿರ್ಧಾರ ಕೈಗೊಳ್ಳಲಾಗಿದೆ' ಎಂದು ಸಚಿವಾಲಯ ತಿಳಿಸಿದೆ.

ಈ ತಿದ್ದುಪಡಿಯಿಂದಾಗಿ ಶೇ 12ಕ್ಕಿಂತ ಅಧಿಕ ಈಥೈಲ್ ಆಲ್ಕೋಹಾಲ್ ಹೊಂದಿರುವ ಔಷಧಗಳು 'ಔಷಧ ನಿಯಮ 1945'ರ ಅನೂಸೂಚಿ 'ಎಚ್‌1' ಅಡಿಗೆ ಬರುವುದರಿಂದ ನೋಂದಾಯಿತ ವೈದ್ಯರು ಚೀಟಿ ನೀಡಿದರೆ ಮಾತ್ರ ಈ ಔಷಧಗಳ ಮಾರಾಟ ಮಾಡಬಹುದು ಮತ್ತು ಮಾರಾಟಗಾರರು ಅದರ ಬಗ್ಗೆ ದಾಖಲೆಗಳನ್ನು ಇಟ್ಟುಕೊಂಡಿರಬೇಕು.

'ಆಲ್ಕೋಹಾಲ್ ಅಂಶ ಹೊಂದಿರುವ ಔಷಧಗಳು ಬೇರೆ ಉದ್ದೇಶಗಳಿಗಾಗಿ ಬಳಕೆಯಾಗುವುದು ಕಡಿಮೆಯಾಗುತ್ತದೆ' ಎಂದು ಸಚಿವಾಲಯ ತಿಳಿಸಿದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries