ಕಾಸರಗೋಡು: ಜಿಲ್ಲೆಯಲ್ಲಿ ಇಕೋ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಹೊಸದಾಗಿ ಚಾಲನೆ ನೀಡುವ ನಿಟ್ಟಿನಲ್ಲಿ ಕುಂಬಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿದೂರು ಜೀವವೈವಿಧ್ಯ ಅಧ್ಯಯನ ಕೇಂದ್ರದಲ್ಲಿ ಜುಲೈ 30 ಮತ್ತು 31 ರಂದು 'ಮಾನ್ಸೂನ್ ಬಯೋ ಡೈವರ್ಸಿಟಿ ಆಂಡ್ ಟ್ರಕ್ಕಿಂಗ್ ಕ್ಯಾಂಪ್'ಆಯೋಜಿಸಲಾಗಿದೆ. ಕಾಸರಗೋಡು ಜಿಲ್ಲಾ ಟೂರಿಸಂ ಪ್ರಮೋಷನ್ ಕೌನ್ಸಿಲ್ (ಡಿ.ಟಿ.ಪಿ.ಸಿ), ಅರಣ್ಯ ಇಲಾಖೆ, ಕುಂಬಳೆ ಕೊಪ್ಪಲಂ ಪೀಸ್ ವ್ಯಾಲಿ ಪ್ರೈವೇಟ್ ಲಿಮಿಟೆಡ್‍ನ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ.
ಕಾಲೇಜು ವಿದ್ಯಾರ್ಥಿಗಳಲ್ಲಿ ಜೀವವೈವಿಧ್ಯ ಸಂರಕ್ಷಣೆ, ಪಕ್ಷಿ ವೀಕ್ಷಣೆ, ಪರಿಸರ ಸಂರಕ್ಷಣೆ, ಪ್ರಕೃತಿಯ ಕುರಿತು ಅಧ್ಯಯನ, ಜವಾಬ್ದಾರಿಯುತ ಪ್ರವಾಸೋದ್ಯಮ ಮತ್ತು ಚಾರಣದ ಕುರಿತು ಆಸಕ್ತಿ ಹಾಗೂ ಅರಿವನ್ನು ಮೂಡಿಸುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗುತ್ತಿದೆ. ಕಿದೂರು ಜೀವವೈವಿಧ್ಯ ಅಧ್ಯಯನ ಕೇಂದ್ರವನ್ನು ಜಿಲ್ಲೆಯ ಪ್ರಮುಖ ಪರಿಸರ-ಪ್ರವಾಸೋದ್ಯಮ ಅಧ್ಯಯನ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇದು ಮೊದಲ ಹಂತದ ಪ್ರಯತ್ನವಾಗಿದೆ.
ಎರಡು ದಿನಗಳ ಶಿಬಿರವು ಕಿದೂರು ಪಕ್ಷಿ ಗ್ರಾಮಕ್ಕೆ ಸಂದರ್ಶನ, ಪಕ್ಷಿ ವೀಕ್ಷಣೆ, ಪಲ್ಲಂ ವೆಟ್ಲ್ಯಾಂಡ್ ಅಧ್ಯಯನ, ಮಿಯಾವಾಕಿ ಅರಣ್ಯ ಸಂದರ್ಶನ, ಪೆÇಸಡಿಗುಂಪೆ ಟ್ರಕ್ಕಿಂಗ್, ರಾತ್ರಿಯ ವೇಳೆ ವನ್ಯಜೀವಿ ವೀಕ್ಷಣೆ, ಜೈವಿಕವೈವಿಧ್ಯತೆ, ವನ್ಯಜೀವಿ ಸಂರಕ್ಷಣೆ ಮತ್ತು ಪರಿಸರ ಸಂರಕ್ಷಣೆ ಎಂಬಿವುಗಳ ಕುರಿತಾದ ತಜ್ಞರ ನೇತೃತ್ವದ ತರಗತಿ, ಪ್ರಕೃತಿ ಅಧ್ಯಯನ ಚಟುವಟಿಕೆ ಹಾಗೂ ಸಂವಾದಾತ್ಮಕ ಚರ್ಚೆಗಳೂ ಇದgಲ್ಲಿ ಒಳಗೊಂಡಿದೆ. ಈ ಶಿಬಿರದಲ್ಲಿ ಭಾಗವಹಿಸುವ ಅವಕಾಶವು ನೋಂದಾಯಿಸಿಕೊಳ್ಳುವ ಮೊದಲ 36 ಮಂದಿ ವಿದ್ಯಾರ್ಥಿಗಳಿಗೆ ಲಭ್ಯವಿರುತ್ತದೆ. ಜಿಲ್ಲೆಯ ವಿವಿಧ ಸರ್ಕಾರಿ, ಅನುದಾನಿತ ಮತ್ತು ಸ್ವಾಶ್ರಯ ಕಾಲೇಜುಗಳ ಆಯ್ಕೆಮಾಡಿದ ವಿದ್ಯಾರ್ಥಿಗಳಿಗೆ ಈ ಶಿಬಿರವನ್ನು ಉಚಿತವಾಗಿ ಆಯೋಜಿಸಲಾಗಿದೆ.
ಭಾಗವಹಿಸುವ ವಿದ್ಯಾರ್ಥಿಗಳಿಗೆ ಕಿದೂರು ಪಕ್ಷಿ ಗ್ರಾಮ, ಪಲ್ಲಂ ವೆಟ್ಲ್ಯಾಂಡ್, ಮಿಯಾವಾಕಿ ಅರಣ್ಯ ಮತ್ತು ಪೆÇಸಡಿಗುಂಬೆ ಟ್ರಕ್ಕಿಂಗ್ ಪ್ರದೇಶಗಳಿಗೆ ಭೇಟಿ ನೀಡುವುದರ ಜೊತೆಗೆ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನಡಿ ನಿರ್ಮಿಸಲಾದ ಕಿದೂರು ಬಯೋಡೈವರ್ಸಿಟಿ ಸ್ಟಡಿ ಸೆಂಟರ್ ನಲ್ಲಿ ಡಾರ್ಮಿಟರಿಯಲ್ಲಿ ಉಳಿದುಕೊಂಡು ಎರಡು ದಿನಗಳ ಶಿಬಿರದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯಲಿದೆ.
ಶಿಬಿರದಲ್ಲಿ ಭಾಗವಹಿಸಲು ಸರ್ಕಾರಿ, ಅನುದಾನಿತ, ಸ್ವಾಶ್ರಯ ಕಾಲೇಜುಗಳ ಟೂರಿಸಂ ಕ್ಲಬ್, ಎನ್‍ಎಸ್‍ಎಸ್, ನೇಚರ್ ಕ್ಲಬ್‍ಗಳಲ್ಲಿ ಸಕ್ರಿಯ ಸದಸ್ಯರಾಗಿರುವ ಗರಿಷ್ಠ ಇಬ್ಬರು ವಿದ್ಯಾರ್ಥಿಗಳಿಗೆ ಸಂಬಂಧಿತ ಕಾಲೇಜಿನ ಪ್ರಾಂಶುಪಾಲರ ಶಿಫಾರಸಿನ ಮೇರೆಗೆ ವಿದ್ಯಾರ್ಥಿಗಳ ವಿವರಗಳನ್ನು ಒಳಗೊಂಡ ಪತ್ರವನ್ನು ಜುಲೈ 25 ರೊಳಗೆ ಡಿಟಿಪಿಸಿ ಕಾಸರಗೋಡಿಗೆ ಸಲ್ಲಿಸಬೇಕು.
ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994 256450, 8547162679-ಕಿದೂರು ಬಯೋಡೈವರ್ಸಿಟಿ ಸ್ಟಡಿ ಸೆಂಟರ್- 9995552247, 9895676308)ಸಂಪರ್ಕಿಸುವಂತೆಪ್ರಕಟಣೆ ತಿಳಿಸಿದೆ.

