HEALTH TIPS

ನಾನು ಗಾಂಧಿಯಲ್ಲ, ನಿಮ್ಮ ಬದುಕಿಗೆ ನೀವೇ ಹೀರೊ ಆಗಿ: ಸೊನಮ್ ವಾಂಗ್ಚೂಕ್ ಕರೆ

 ನವದೆಹಲಿ: 'ನನ್ನನ್ನು ಗಾಂಧಿ ಅಥವಾ ಹೀರೊ ಎಂದು ಕರೆಯಬೇಡಿ. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ತಮ್ಮ ಬದುಕಿನ ಹೀರೊಗಳಾಗಬೇಕು ಎಂದು ಹೋರಾಟಗಾರ ಸೊನಮ್ ವಾಂಗ್ಚೂಕ್ ಜನತೆಗೆ ಕರೆ ನೀಡಿದ್ದಾರೆ.


ದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಅವರು, ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ.

ತಮ್ಮ ಉಪವಾಸದ ದಿನಗಳ ಅನುಭವ ಹಂಚಿಕೊಂಡಿರುವ ವಾಂಗ್ಚೂಕ್, 'ಆರಂಭದ ದಿನಗಳಿಗೆ ಹೋಲಿಸಿದರೆ ದೇಹದಲ್ಲಿ ಕೊಂಚ ಆಯಾಸ ಕಾಣಿಸಿಕೊಂಡಿದೆ. ಆದರೂ ಹೋರಾಟದ ಹಾದಿಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ' ಎಂದು ದೃಢ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹೋರಾಟಕ್ಕೆ ಸಾಥ್ ನೀಡಿ'

ದೇಶದಲ್ಲಿ ಇತ್ತೀಚೆಗೆ ನಡೆದ ಪರೀಕ್ಷಾ ಅಕ್ರಮಗಳು ಹಾಗೂ ಅದರಿಂದಾಗಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆಗಳ ಬಗ್ಗೆ ಕಳಕಳಿ ವ್ಯಕ್ತಪಡಿಸಿರುವ ಅವರು, 'ಕಾಕ್ರೋಚ್ ಜನತಾ ಪಾರ್ಟಿ' ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡುವಂತೆ ಕೋರಿದ್ದಾರೆ.

ಸಿನಿ ಸಿಪ್‌ ಪಾಡ್‌ಕಾಸ್ಟ್‌: ಸಿನಿಮಾ ರಂಗದಲ್ಲಿ ಮದುವೆ, ಮರು ಮದುವೆ ಪ್ರಸಂಗಗಳು...ಪೋಷಕರೇ.. ಅತಿಯಾಗಿ ಮೊಬೈಲ್ ಬಳಸುವ ಮಕ್ಕಳ ಮೇಲೆ ಇರಲಿ ಗಮನ

'ಸಂಕಷ್ಟಕ್ಕೆ ಸಿಲುಕಿದ ಆ ವಿದ್ಯಾರ್ಥಿಗಳಲ್ಲಿ ನಿಮ್ಮ ಸ್ವಂತ ತಂಗಿಯೋ ಅಥವಾ ಮಗಳೋ ಆಗಿದ್ದಿದ್ದರೆ ನೀವು ಸುಮ್ಮನಿರುತ್ತಿದ್ದಿರಾ? ಖಂಡಿತ ಇಲ್ಲ. ಪರಿಸ್ಥಿತಿ ನಿಮ್ಮ ಮನೆ ಬಾಗಿಲಿಗೆ ಬರುವವರೆಗೂ ಕಾಯಬೇಡಿ. ದೆಹಲಿಗೆ ಬರಲು ಸಾಧ್ಯವಾಗದಿದ್ದರೆ, ನೀವು ಇರುವ ಜಾಗದಲ್ಲೇ ಒಂದು ದಿನದ ಉಪವಾಸ ನಡೆಸಿ ನಿಮ್ಮ ಬೆಂಬಲ ಸೂಚಿಸಿ' ಎಂದು ಸೊನಮ್ ವಾಂಗ್ಚೂಕ್ ಹೇಳಿದ್ದಾರೆ.

ಪ್ರಸ್ತುತ ಜಂತರ್ ಮಂತರ್‌ನಲ್ಲಿ ಪರೀಕ್ಷಾ ಅಕ್ರಮಗಳ ವಿರುದ್ಧದ ಹೋರಾಟವು ಸತತ 22 ದಿನಗಳನ್ನು ಪೂರೈಸಿದ್ದರೆ, ಸೊನಮ್ ವಾಂಗ್ಚೂಕ್ ಅವರ ಉಪವಾಸ ಸತ್ಯಾಗ್ರಹವು 14ನೇ ದಿನಕ್ಕೆ ಕಾಲಿಟ್ಟಿದ್ದು, ಅವರ ದೇಹದ ತೂಕ 7 ಕೆ.ಜಿ ಕಡಿಮೆಯಾಗಿದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries