ಕಾಸರಗೋಡು: ಬಿಜೆಪಿ ಮಂಡಲ ಸಮಿತಿಗಳ ಆಶ್ರಯದಲ್ಲಿ ಜಿಲ್ಲೆಯ ವಿವಿಧ ಸಂಘಟನಾ ಮಂಡಲಗಳಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ್ ಮಹಾ ಅಭಿಯಾನದ ಅಧ್ಯಯನ ಶಿಬಿರ ಜುಲೈ 18 ಮತ್ತು 19ರಂದು ಜರುಗಲಿವೆ.
ಕುಂಬಳೆ ಸಂಘಟನಾ ಮಂಡಲದ ಅಧ್ಯಯನ ಶಿಬಿರ ಪೆರ್ಲ ಶ್ರೀಶಂಕರ ಸದನದಲ್ಲಿ ನಡೆಯಲಿದೆ. ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ನವ್ಯಾ ಹರಿದಾಸ್ ಉದ್ಘಾಟಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಬಿಜೆಪಿ ಕೋಯಿಕ್ಕೋಡ್ ವಲಯ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ ಪಾಲ್ಗೊಳ್ಳಲಿದ್ದಾರೆ.
ತೃಕ್ಕರಿಪ್ಪುರ ಸಂಘಟನಾ ಮಂಡಲದ ಅಧ್ಯಯನ ಶಿಬಿರ ಶ್ರೀ ಚಕ್ರಪಾಣಿ ವಿದ್ಯಾಮಂದಿರದಲ್ಲಿ ನಡೆಯಲಿದೆ. ಬಿಜೆಪಿ ರಾಜ್ಯ ಸಮಿತಿ ಸದಸ್ಯ ಎ. ವೇಲಾಯುಧನ್ ಉದ್ಘಾಟಿಸುವರು. ಸಮಾರೋಪ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಸೆಲ್ ಕೋಆರ್ಡಿನೇಟರ್ ವಿ. ಕೆ. ಸಜೀವನ್ ಭಾಗವಹಿಸಲಿದ್ದಾರೆ.
ನೀಲೇಶ್ವರ ಸಂಘಟನಾ ಮಂಡಲದ ಅಧ್ಯಯನ ಶಿಬಿರವು ಚೀಮೇನಿ ಮುಂಡದಲ್ಲಿ ನಡೆಯಲಿದೆ. ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು ಶಿಬಿರ ಉದ್ಘಾಟಿಸುವರು. ಸಮಾರೋಪ ಸಮಾರಂಭದಲ್ಲಿ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ. ಎಲ್. ಪಾಲ್ಗೊಳ್ಳಲಿದ್ದಾರೆ. ಪ್ರತಿ ಅಧ್ಯಯನ ಶಿಬಿರದಲ್ಲೂ ವಿವಿಧ ಪಂಚಾಯತ್ ಏರಿಯಾಗಳಿಂದ ನೂರಕ್ಕೂ ಹೆಚ್ಚು ಪದಾಧಿಕಾರಿಗಳು ಪ್ರತಿನಿಧೀಗಳಾಗಿ ಭಾಗವಹಿಸಲಿದ್ದಾರೆ.

