HEALTH TIPS

ಇರಾನ್ ಜತೆಗಿನ ಒಪ್ಪಂದ ಮುಗಿದ ಅಧ್ಯಾಯ ಎಂದ ಟ್ರಂಪ್: ತೈಲ ಬೆಲೆ ದಿಢೀರ್ ಏರಿಕೆ

ವಾಷಿಂಗ್ಟನ್: 'ಯುದ್ಧ ಕೊನೆಗೊಳಿಸಲು ಇರಾನ್‌ನೊಂದಿಗೆ ಸಹಿ ಮಾಡಲಾಗಿದ್ದ ತಿಳುವಳಿಕಾ ಒಪ್ಪಂದ (ಎಂಒಯು) ಈಗ ಮುಗಿದ ಅಧ್ಯಾಯ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಜಾಗತಿಕ ಕಚ್ಚಾ ತೈಲ ಬೆಲೆಗಳು ಶೇಕಡ 5ಕ್ಕಿಂತ ಹೆಚ್ಚು ಜಿಗಿತ ಕಂಡಿದ್ದು, ಎರಡು ವಾರಗಳ ಗರಿಷ್ಠ ಮಟ್ಟ ತಲುಪಿವೆ. 


ಅಮೆರಿಕ-ಇರಾನ್ ನಡುವಿನ ಮಧ್ಯಂತರ ಶಾಂತಿ ಒಪ್ಪಂದದ ಕುರಿತು ಅನಿಶ್ಚಿತತೆ ಮುಂದುವರಿದಿದ್ದು, ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದು ಎಂಬ ಆತಂಕ ಎದುರಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರವು ಶೇ 5.15ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ ದರವು 77.98 ಡಾಲರ್ ತಲುಪಿದೆ. ಹಾಗೆಯೇ ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್‌ಮೀಡಿಯೇಟ್ ಕಚ್ಚಾ ತೈಲ ದರವು ಶೇ 5.25ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ ದರವು 74.14 ಡಾಲರ್ ಆಗಿದೆ.

ಇರಾನ್‌ನ ಕಚ್ಚಾ ತೈಲ ಮಾರಾಟಕ್ಕೆ ಅನುಮತಿ ನೀಡಿದ್ದ ಸಾಮಾನ್ಯ ಪರವಾನಗಿಯನ್ನು ಅಮೆರಿಕ ರದ್ದುಗೊಳಿಸಿದ ನಂತರ, ಮಂಗಳವಾರವೂ ಎರಡೂ ತೈಲ ಬೆಲೆಗಳು ಶೇಕಡ 3ರಷ್ಟು ಏರಿಕೆಯಾಗಿದ್ದವು.

ಅಂಕಾರಾದಲ್ಲಿ ನಡೆಯಲಿರುವ ನ್ಯಾಟೊ ಶೃಂಗಸಭೆಗೆ ಮುನ್ನ ಮಾತನಾಡಿದ ಟ್ರಂಪ್, 'ಫೆಬ್ರುವರಿಯಲ್ಲಿ ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ಆರಂಭಿಸಿದ್ದ ಯುದ್ಧವನ್ನು ಕೊನೆಗೊಳಿಸಲು ಮಾಡಿಕೊಂಡಿದ್ದ ಮಧ್ಯಂತರ ಒಪ್ಪಂದವು ಈಗ ಮುಗಿದ ಅಧ್ಯಾಯ. ಇರಾನ್ ಜತೆ ಯಾವುದೇ ಮಾತುಕತೆ ನಡೆಸಲು ಬಯಸುವುದಿಲ್ಲ' ಎಂದು ಹೇಳಿದ್ದಾರೆ.

ಹೊರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುತ್ತಿದ್ದ ಮೂರು ವಾಣಿಜ್ಯ ಹಡಗುಗಳ ಮೇಲೆ ಇರಾನ್ ನಡೆಸಿದ ದಾಳಿಗೆ ಪ್ರತಿಯಾಗಿ ಅಮೆರಿಕವು ಹೊಸ ವೈಮಾನಿಕ ದಾಳಿಗಳನ್ನು ನಡೆಸಿತ್ತು ಎಂದು ಅಮೆರಿಕ ಸೆಂಟ್ರಲ್ ಕಮಾಂಡ್ ಮಂಗಳವಾರ ತಿಳಿಸಿದೆ. ಇದರ ಬೆನ್ನಲ್ಲೇ, ನಾವು ಬಹ್ರೇನ್ ಮತ್ತು ಕುವೈತ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಹೇಳಿದೆ.

ಇರಾನ್ ಹಡಗುಗಳ ಮೇಲಿನ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. ಆದರೆ, ಕತಾರ್ ದೇಶವು ಇದಕ್ಕೆ ಇರಾನ್ ಕಾರಣ ಎಂದು ದೂಷಿಸಿದೆ. ದಾಳಿಗೊಳಗಾದ ಹಡಗುಗಳಲ್ಲಿ ಕತಾರ್‌ನ ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಟ್ಯಾಂಕರ್ ಕೂಡ ಸೇರಿದೆ ಎಂದು ವರದಿಯಾಗಿದೆ.

ಕಳೆದ ತಿಂಗಳು ಅಮೆರಿಕ ಮತ್ತು ಇರಾನ್ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಜಾಗತಿಕ ತೈಲ ಬೆಲೆಗಳು ಇಳಿಕೆ ಕಂಡಿದ್ದವು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries