ಕಾಸರಗೋಡು: ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯು, ಆಗಸ್ಟ್ 15 ರಂದು ದೇಶದ ಸ್ವಾತಂತ್ರ್ಯ ದಿನಾಚರಣೆಯನ್ನು ಜಿಲ್ಲೆಯಲ್ಲಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿತು. ಜಿಲ್ಲಾ ಮಟ್ಟದ ಪರೇಡ್ ವಿದ್ಯಾ ನಗರದ ಕಾಸರಗೋಡು ಪುರಸಭಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಸ್ವಾತಂತ್ರ್ಯ ದಿನಾಚರಣೆಯ ಯಶಸ್ಸಿಗೆ ಎಲ್ಲಾ ಸರ್ಕಾರಿ ಅಧಿಕಾರಿಗಳ ಸಹಕಾರ ಅತ್ಯಗತ್ಯವೆಂದು ಸಹ ಇದೇ ವೇಳೆ ಒತ್ತಿಹೇಳಲಾಯಿತು.ಜಿಲ್ಲಾಧಿಕಾರಿ ಕಚೇರಿಯ ಕಿರು ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಎಡಿಎಂ ಪಿ. ಉದಯಕುಮಾರ್ ಅವರು, ಕಾರ್ಯಕ್ರಮಕ್ಕೆ ಸಾರ್ವಜನಿಕರ ಭಾಗವಹಿಸುವಿಕೆ ಅತ್ಯಗತ್ಯ ಎಂದು ತಿಳಿಸಿದರು.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಎಆರ್ (ಂಖ) ಕ್ಯಾಂಪ್‍ನ ಸಹಾಯಕ ಕಮಾಂಡೆಂಟ್ ನೇತೃತ್ವದಲ್ಲಿ ನಡೆಯಲಿರುವ ಪಥಸಂಚಲನದ ತಾಲೀಮು, ಕಾಸರಗೋಡು ನಗರಸಭಾ ಕ್ರೀಡಾಂಗಣದಲ್ಲಿ ಆಗಸ್ಟ್ 10, 11 ಮತ್ತು ಆಗಸ್ಟ್ 13 ರಂದು ನಡೆಯಲಿವೆ. ಸ್ವತಂತ್ರ್ಯೋತ್ಸವ ಅಂಗವಾಗಿ, ದೇಶಭಕ್ತಿಯ ಭಾವನೆಯನ್ನು ಮೂಡಿಸುವ ಕಾರ್ಯಕ್ರಮ, ಸಾಂಸ್ಕøತಿಕ ವೈವಿಧ್ಯ ಪ್ರಸ್ತುತಪಡಿಸಲು ಆಸಕ್ತಿ ಹೊಂದಿರುವ ಶಾಲೆಗಳು ಜಿಲ್ಲಾಧಿಕಾರಿ ಕಚೇರಿಯ 'ಡಿ' (ಆ) ವಿಭಾಗವನ್ನು ಸಂಪರ್ಕಿಸಬೇಕು. ಕ್ರೀಡಾಂಗಣದಲ್ಲಿ ಅಗತ್ಯವಿರುವ ಪೆಂಡಾಲ್, ಪೀಠೋಪಕರಣಗಳು, ದೀಪಾಲಂಕಾರ ಮತ್ತು ಧ್ವನಿವರ್ಧಕ ವ್ಯವಸ್ಥೆಗಳನ್ನು ಒದಗಿಸುವ ಜವಾಬ್ದಾರಿಯನ್ನು ಪಿಡಬ್ಲ್ಯೂಡಿಗೆ, ಭದ್ರತಾ ವ್ಯವಸ್ಥೆಗಳ ಉಸ್ತುವಾರಿಯನ್ನು ಕಾಸರಗೋಡು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗೆ ಹಾಗೂ ಕ್ರೀಡಾಂಗಣ ಮತ್ತು ಅದರ ಆವರಣವನ್ನು ಸ್ವಚ್ಛಗೊಳಿಸುವ ಜವಾಬ್ದಾರಿಯನ್ನು ಕಾಸರಗೋಡು ನಗರಸಭಾ ಕಾರ್ಯದರ್ಶಿಗೆ ವಹಿಸಿಕೊಡಲಾಗಿದೆ ಎಂದು ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ಕಚೇರಿಯ ಕಿರು ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಆರ್‍ಡಿಒಗಳಾದ ಎಂ.ಎಸ್. ವಿಜುಕುಮಾರ್ ಮತ್ತು ಪಿ. ಸುದೀಪ್, ಕಾಸರಗೋಡು ತಹಸೀಲ್ದಾರ್ ವಿ. ಶ್ರೀಕುಮಾರ್ ಹಾಗೂ ಕಾರ್ಯಕ್ರಮದ ಆಯೋಜನೆಯಲ್ಲಿ ತೊಡಗಿರುವ ವಿವಿಧ ಇಲಾಖೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.



