ಕಾಸರಗೋಡು: ಕೇಂದ್ರ ಸರ್ಕಾರದ 'ರಾಷ್ಟ್ರೀಯ ವಯೋಶ್ರೀ ಯೋಜನೆ'ಯನ್ವಯ ಪ್ರಧಾನಮಂತ್ರಿ ದಿವ್ಯಾಂಗ ಕೇಂದ್ರವು ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ನೋಂದಣಿ ಹಾಗೂ ತಪಾಸಣಾ ಶಿಬಿರ ಹಮ್ಮಿಕೊಂಡಿದೆ.
ಜುಲೈ 21ರಂದು ಉಳಿಯತ್ತಡ್ಕದ ಮಧೂರು ಪಂಚಾಯಿತಿ ಅಟಲ್ ಜಿ ಕಮ್ಯೂನಿಟಿ ಹಾಲ್‍ನಲ್ಲಿ, ಜುಲೈ 22ರಂದು ಕಾರಡ್ಕ ಪಂಚಾಯಿತಿಯ ಮುಳ್ಳೇರಿಯ ಶ್ರೀ ಗಣೇಶ ಕಲಾಮಂದಿರದಲ್ಲಿ, ಜುಲೈ 23ರಂದು ಕುತ್ತಿಕ್ಕೋಲ್ ಸೋಪಾನಂ ಆಡಿಟೋರಿಯಂನಲ್ಲಿ ಮತ್ತು ಜುಲೈ 24ರಂದು ವೆಳ್ಳರಿಕುಂಡು ರೆವಿನ್ಯೂ ತಾಲೂಕಿನ ಬಳಾಂತೋಡ್ ಮಿಲ್ಮಾ ಹಾಲ್‍ನಲ್ಲಿ ಶಿಬಿರ ನಡೆಯಲಿದೆ. ಬೆಳಗ್ಗೆ 10ರಿಂದ ಸಂಜೆ 3ರ ವರೆಗೆ ನೋಂದಣಿ ಪ್ರಕ್ರಿಯೆ ನಡೆಯಲಿದೆ.
60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ದಿವ್ಯಾಂಗರು ಶಿಬಿರದಲ್ಲಿ ಭಾಗವಹಿಸಬಹುದಾಗಿದೆ. ತಪಾಸಣೆಯ ಆಧಾರದ ಮೇಲೆ ಅರ್ಹ ಫಲಾನುಭವಿಗಳಿಗೆ ವೀಲ್‍ಚೇರ್, ವಾಕಿಂಗ್ ಸ್ಟಿಕ್, ಬೆನ್ನುನೋವಿನ ಬೆಲ್ಟ್ ಸೇರಿದಂತೆ ವಿವಿಧ ಸಹಾಯೋಪಕರಣಗಳ ಉಚಿತ ವಿತರಣೆ ನಡೆಯಲಿರುವುದು.
ಶಿಬಿರದಲ್ಲಿ ಭಾಗವಹಿಸುವವರು ಆಧಾರ್ ಕಾರ್ಡ್, ಪಾಸ್‍ಪೆÇೀರ್ಟ್ ಸೈಜ್ ಕಲರ್ ಫೆÇೀಟೋ, ದಿವ್ಯಾಂಗರಿಗಿರುವ ಯುಡಿಐಡಿ ಗುರುತಿನ ಕಾರ್ಡ್, ವಿಕಲಚೇತನ ಪ್ರಮಾಣಪತ್ರ ಮತ್ತು ಬಿಪಿಎಲ್ ರೇಷನ್ ಕಾರ್ಡ್ ಹಾಜರುಪಡಿಸಬೇಕು. 15,000 ರೂಪಾಯಿಗಿಂತ ಕಡಿಮೆ ಆದಾಯ ಹೊಂದಿರುವ ಎಪಿಎಲ್ ವರ್ಗದವರು ಆದಾಯ ಪ್ರಮಾಣಪತ್ರವನ್ನು ಹಾಗೂ ಶ್ರವಣ ದೋಷ ಉಳ್ಳವರು ಆಡಿಯೋಗ್ರಾಮ್ ವರದಿಯನ್ನು ತರಬೇಕಾಗಿ ವಿನಂತಿಸಲಾಗಿದೆ.



