ನವದೆಹಲಿ (PTI): ಮಹತ್ವದ 40 ಬಗೆಯ ಪೆಟ್ರೊ ರಾಸಾಯನಿಕಗಳ ಆಮದಿಗೆ ನೀಡಿದ್ದ ಸೀಮಾಸುಂಕ ವಿನಾಯಿತಿಯನ್ನು ಕೇಂದ್ರ ಸರ್ಕಾರವು 15 ದಿನಗಳವರೆಗೆ ವಿಸ್ತರಣೆ ಮಾಡಿದೆ.
ಈ ಪೆಟ್ರೊ ರಾಸಾಯನಿಕಗಳ ಪೂರೈಕೆಯಲ್ಲಿ ಸ್ಥಿರತೆ ಮುಂದುವರಿಯಬೇಕು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಹೇಳಿದೆ.
ಇವುಗಳಿಗೆ ಸೀಮಾಸುಂಕ ವಿನಾಯಿತಿ ನೀಡಿ ಕೇಂದ್ರವು ಏಪ್ರಿಲ್ 2ರಂದು ಆದೇಶಿಸಿತ್ತು. ಇದು ಜೂನ್ 30ರವರೆಗೆ ಜಾರಿಯಲ್ಲಿತ್ತು. ಈಗ ವಿನಾಯಿತಿಯನ್ನು ಜುಲೈ 15ರವರೆಗೆ ವಿಸ್ತರಣೆ ಮಾಡಲಾಗಿದೆ.
ಸೀಮಾಸುಂಕ ವಿನಾಯಿತಿಯು ಪೆಟ್ರೊ ರಾಸಾಯನಿಕಗಳನ್ನು ಅವಲಂಬಿಸಿರುವ ಪ್ಲಾಸ್ಟಿಕ್, ಜವಳಿ, ಫಾರ್ಮಾ, ರಾಸಾಯನಿಕ,ವಾಹನ ಬಿಡಿಭಾಗ ಹಾಗೂ ಇತರ ಹಲವು ವಲಯಗಳಿಗೆ ಪ್ರಯೋಜನಕಾರಿ ಆಗಲಿದೆ ಎಂಬ ನಿರೀಕ್ಷೆ ಇದೆ ಎಂದು ಕೇಂದ್ರ ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

