HEALTH TIPS

ಶಿರೂರ್ ಭೂಕುಸಿತ ದುರಂತಕ್ಕೆ ಎರಡು ವರ್ಷಗಳು: ಕಣ್ಣೀರಿನ ನೆನಪುಗಳು ಈಗ ಪುಸ್ತಕ ರೂಪದಲ್ಲಿ, ಮಂಜೇಶ್ವರ ಶಾಸಕರಿಂದ ಹೀಗೊಂದು ಪ್ರಯತ್ನ

ಮಂಜೇಶ್ವರ: ಕರ್ನಾಟಕದ ಕಾರವಾರ ಬಳಿಯ ಶಿರೂರ್‍ನಲ್ಲಿ ಭೂಕುಸಿತದಿಂದ ಕಾಣೆಯಾಗಿ ಬಳಿಕ ಮೃತರಾದ ಕೋಝಿಕ್ಕೋಡ್‍ನ ಕನ್ನಡಿಕಲ್ ಮೂಲದ ಅರ್ಜುನ್ ಮೃತರಾಗಿ ಎರಡು ವರ್ಷಗಳಾದವು. ಆ ದಿನಗಳಲ್ಲಿ ರಕ್ಷಣಾ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಅವರು ಬರೆದಿರುವ '72 ಶಿರೂರ್ ಡೇಸ್' ಪುಸ್ತಕ ಶೀಘ್ರದಲ್ಲೇ ವಿಧಾನಸಭೆಯಲ್ಲಿ ಬಿಡುಗಡೆಯಾಗಲಿದೆ. 


'ಪಶ್ಚಿಮ ಘಟ್ಟಗಳ ಆ ಬೆಟ್ಟದ ಇಳಿಜಾರಿನಲ್ಲಿರುವ ಜನರು ಜಾತಿ ಮತ್ತು ಧರ್ಮವನ್ನು ಮರೆತು ಸಾಮೂಹಿಕ ಕಾರ್ಯಾಚರಣೆಯಲ್ಲಿ ತೊಡಗಿದ ಆ ದಿನಗಳು ದಿನಗಳೆದಂತೆ ಇತಿಹಾಸದಿಂದ ಮರೆಯಾಗಬಹುದು. ಮಾನವ ಸಾಮರಸ್ಯದ ಆ ಸಮುದಾಯದ ಕಥೆಯನ್ನು ಶಾಶ್ವತವಾಗಿ ಸಂರಕ್ಷಿಸುವುದು ಈ ಪುಸ್ತಕದ ಲಕ್ಷ್ಯ ಎಂದು ಶಾಸಕ ಎ.ಕೆ.ಎಂ. ಅಶ್ರಫ್ ಹೇಳಿದ್ದಾರೆ.

ಜುಲೈ 16, 2024 ರಂದು ಅರ್ಜುನ್ ಕರ್ನಾಟಕದ ಹುಬ್ಬಳ್ಳಿಯಿಂದ ಕೋಝಿಕ್ಕೋಡ್‍ಗೆ ಮರದ ದಿಮ್ಮಿಗಳನ್ನು ಸಾಗಿಸುವ ಲಾರಿಯೊಂದಿಗೆ ಬರುತ್ತಿದ್ದಾಗ ಈ ಅವಘಡ ಸಂಭವಿಸಿತಯ್ತು. ಈ ಪುಸ್ತಕವು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರವಾರ ಶಾಸಕ ಸತೀಶ್ ಕೃಷ್ಣ ಸೈಲ್, ಕಲೆಕ್ಟರ್ ಲಕ್ಷ್ಮಿ ಪ್ರಿಯ, ಅರ್ಜುನ್ ಅವರ ತಾಯಿ, ಪತ್ನಿ ಮತ್ತು ಭಾವ ಅವರ ಅನುಭವಗಳನ್ನು ಸಹ ಒಳಗೊಂಡಿದೆ.

ದುರಂತದ ಆರಂಭಿಕ ದಿನಗಳಲ್ಲಿ ಕೆಲವು ಜನರ ಒತ್ತಡದಿಂದಾಗಿ ಹುಡುಕಾಟ ಹಳಿತಪ್ಪಿತು ಎಂದು ಶಾಸಕ ಸತೀಶ್ ಕೃಷ್ಣ ಸೈಲ್ ಮತ್ತು ಕಲೆಕ್ಟರ್ ಲಕ್ಷ್ಮಿ ಪ್ರಿಯಾ ಪುಸ್ತಕದಲ್ಲಿ ಆರೋಪಿಸಿದ್ದಾರೆ. ನದಿಯಲ್ಲಿ ಹುಡುಕಲು ಪ್ರಯತ್ನಿಸಿದಾಗ, ಲಾರಿ ರಸ್ತೆಯ ಮಣ್ಣಿನಡಿಯೇ ಸಿಲುಕಿದೆ ಎಂದು ಮತ್ತು ಅಲ್ಲಿ ಹುಡುಕಾಟ ನಡೆಸಬೇಕು ಎಂದು ಹಲವರು ಒತ್ತಡಹೇರಿದ್ದರು. ಆದರೆ ಕೇರಳದಿಂದ ಬಂದವರು ಸೇರಿದಂತೆ ಕೆಲವರು ಅಲ್ಲೇ ಹುಡುಕಾಟಕ್ಕೆ ಒತ್ತಾಯಿಸಿದ್ದರು. ಈ ಕಾರಣ ತಡವಾಗಿಯಾದರೂ ನದಿಯಲ್ಲಿ(ಗಂಗಾವಳಿ ನದಿ) ನಡೆಸಿದ ಹುಡಕಾಟದಿಂದ  ಕೊನೆಗೂ ಅವಘಡದ 72 ದಿನಗಳ ನಂತರ ಸೆಪ್ಟೆಂಬರ್ 25, 2024 ರಂದು ಅರ್ಜುನ್ ಅವರ ಶವವನ್ನು ನದಿಯಿಂದ ಹೊರತೆಗೆಯಲಾಯಿತು ಎಂದು ಅವರು ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ಶಾಸಕ ಎಕೆಎಂ ಅಶ್ರಫ್ ಘಟನೆ ನಡೆದ ಬಳಿಕ ಶಿರೂರಲ್ಲಿ ಸಂಪೂರ್ಣ ವಾಸ್ತವ್ಯ ಹೂಡಿ ಅಲ್ಲಿಯ ಕಾರ್ಯಾಚರಣೆಗೆ ಪೂರ್ಣ ಸಹಕಾರ ನೀಡಿದ್ದರು. 72 ದಿನಗಳ ನಿರಂತರ ಕಾರ್ಯಾಚರಣೆಯ ನೋವು, ಸವಾಲು, ಗೊಂದಲ, ನೆರವು ಇತ್ಯಾದಿ ಹಲವು ವಿಷಯಗಳನ್ನು ಈ ಕೃತಿಯಲ್ಲಿ ವಿಸ್ಕøತವಾಗಿ ವಿವರಿಸಲಾಗಿದೆ. ಕನ್ನಡ ಹಾಗೂ ಮಲೆಯಾಳಂ ಎರಡೂ ಭಾಷೆಗಳಲ್ಲೂ ಈ ಕೃತಿ ಹೊರಬರಲು ಸಿದ್ದಗೊಂಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries