ಬದಿಯಡ್ಕ: ಸ್ವಚ್ಛತಾ ಮಿಷನ್, ಶಿಕ್ಷಣ ಇಲಾಖೆ ಮತ್ತು ಸ್ಥಳೀಯಾಡಳಿತ ಇಲಾಖೆಯ ಸಹಯೋಗದೊಂದಿಗೆ ಬದಿಯಡ್ಕ ಗ್ರಾಮ ಪಂಚಾಯಿತಿಯ ಆಯ್ಕೆಯಾದ ಶಾಲೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಹಸಿರು ವಿದ್ಯಾಲಯ (ಹಸಿರು ಶಾಲೆ) ಅಭಿಯಾನದ ಚಟುವಟಿಕೆಗಳಿಗೆ ಜಿ.ಎಚ್.ಎಸ್. ಪೆರಡಾಲದಲ್ಲಿ ಚಾಲನೆ ನೀಡಲಾಯಿತು. ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ ಡಿ. ಉದ್ಘಾಟಿಸಿದರು. ವಾರ್ಡ್ ಸದಸ್ಯೆ ಶಾಹಿನಾ ಅನ್ವರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಮಾಧವನ್, ಪಿ. ಟಿ. ಎ. ಅಧ್ಯಕ್ಷ ರಾಮ, ಸಹಾಯಕ ಕಾರ್ಯದರ್ಶಿ ಪಿ. ಕೆ. ಸಜಿ, ಆರೋಗ್ಯ ಇಲಾಖೆಯ ಪಿ. ಕೆ. ಬಾಬುರಾಜ್ ಹಾಗೂ ಹಸಿರು ಕ್ರಿಯಾಸೇನೆಯ ಸುಹರಾ ಮಾತನಾಡಿದರು. ಸ್ವಚ್ಛತಾ ಮಿಷನ್ ಸಂಪನ್ಮೂಲ ವ್ಯಕ್ತಿ ರಂಜಿನಿ ಅವರು ಸ್ವಚ್ಛತೆಯ ಪ್ರತಿಜ್ಞಾವಿ ಬೋಸಿ, ವಿಷಯ ಮಂಡನೆ ಮಾಡಿದರು. ಶಿಕ್ಷಕರು, ಹಸಿರು ಕ್ರಿಯಾಸೇನೆಯ ಸದಸ್ಯರು, ಇಕೋ ಕ್ಲಬ್ ಸದಸ್ಯರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ವಿಂಗಡಣೆ ಕುರಿತು ತರಬೇತಿ ಹಾಗೂ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

.jpg)
