ಕಾಸರಗೋಡು: ನಗರದ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನ ಸಮೀಪವಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿ ಸನ್ನಿಧಿಯಲ್ಲಿ ಸಂಪೂಜ್ಯ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 355ನೇ ಆರಾಧನಾ ಮಹೋತ್ಸವವು ವಿವಿಧ ವೈದಿಕ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಆಗಸ್ಟ್ 30ರಂದು ಜರಗಲಿದೆ. ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ದೇವಸ್ಥಾನದಲ್ಲಿ ಜರುಗಿತು.
ಶ್ರೀ ಕ್ಷೇತ್ರದ ಮೊಕ್ತೆಸರ ಹಾಗೂ ತಂತ್ರಿವರ್ಯ ಬ್ರಹ್ಮಶ್ರೀ ವಿಷ್ಣು ಆಸ್ರ ಉಳಿಯತ್ತಾಯ ಆಮಂತ್ರಣಪತ್ರಿಕೆ ಬಿಡುಗಡೆಗೊಳಿಸಿದರು. ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ಯೋಜನಾಧಿಕಾರಿ ದಿನೇಶ್ ಅವರಿಗೆ ಮೊದಲ ಪ್ರತಿಯನ್ನು ನೀಡಿ ಆಮಂತ್ರಣಪತ್ರಿಕೆ ಬಿಡುಗಡೆಗೊಳಿಸಲಾಯಿತು. ಸಮಾರಂಭದಲ್ಲಿಕಾಸರಗೋಡು ನಗರಸಭಾ ಸದಸ್ಯ ಕೆ ಎನ್ ರಾಮಕೃಷ್ಣ ಹೊಳ್ಳ, ಪಾಂಗೊಡು ಕ್ಷೇತ್ರದ ಪ್ರಮುಖರಾದ ಡಾ. ವಾಮನ್ ರಾವ್ ಬೇಕಲ್, ಕ್ಷೇತ್ರ ಪ್ರಮುಖರಾದ ಡಾ. ಕೆ ಎನ್ ವೆಂಕಟ್ರಮಣ ಹೊಳ್ಳ, ಭರತರಾಜ್ ಶೆಟ್ಟಿ, ಶೇಷಾದ್ರಿ ಹೊಳ್ಳ ಮೊದಲಾದವರು ಉಪಸ್ಥಿತರಿದ್ದರು.



