ಪೆರ್ಲ: ನಲ್ಕ ನಂದಾದೀಪ ಸಂಘಟನೆ ನಡೆಸುತ್ತಿರುವ ಪ್ರತಿಭಾ ಪುರಸ್ಕಾರ ಸಮಾರಂಭ ನಲ್ಕ ಶ್ರೀ ವಾಗ್ದೇವಿ ಸೇವಾಮಂದಿರದಲ್ಲಿ ಜರುಗಿತು. ಶ್ರೀ ವಾಗ್ದೇವೀ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ನಾಯ್ಕ ಕುದ್ಕೋಳಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಈ ಸಂದರ್ಭ ಹತ್ತನೇ ತರಗತಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಸಾನ್ವಿ ವಸಂತ ನಾಯಕ್, ಯಕ್ಷಿತಾ ವಿ, ಪ್ಲಸ್ ಟು ವಿಭಾಗದಲ್ಲಿ ಅತ್ಯುತ್ತಮ ಅಂಕ ಗಳಿಸಿದ ಲಿಖಿತಾ, ವೈಷ್ಣವಿ ಪಿ ಎಸ್, ಪ್ರೇರಣಾ ಸಿ, ಹಾಗೂ ಬಿಬಿಎಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಅನುಜ್ಞಾ ಯನ್ ಅವರನ್ನು ಅಭಿನಂದಿಸಲಾಯಿತು.
ಮಮತಾ ರೆಂಜಮೂಲೆ, ನಂದಾದೀಪ ಸಂಘಟನೆಯ ಅಧ್ಯಕ್ಷ ಹರಿಪ್ರಸಾದ್ ರೆಂಜಮೂಲೆ, ಕಾರ್ಯದರ್ಶಿ ಜಗದೀಶ್ ಕುಲಾಲ್ ಖಂಡಿಗೆ, ಕೋಶಾಧಿಕಾರಿ ಸದಾಶಿವ ಬನಾರಿ, ಸಂಚಾಲಕ ಹರೀಶ್ ಕುಲಾಲ್ ಖಂಡಿಗೆ, ಸದಸ್ಯರಾದ ಅಜಿತ್ ಕುಮಾರ್ ನಲ್ಕ ಕಾನ, ಶಿವಕುಮಾರ್ ರೆಂಜಮೂಲೆ, ಚಂದ್ರಶೇಖರ ಕುದ್ಕೋಳಿ, ಅಶೋಕ್ ಅಬ್ಬಿಕಟ್ಟೆ, ನಾಗೇಶ್ ಜಾಲಕೊಟ್ಯ, ವಿನೋದ ಕಿಟ್ಟಕುಮೇರಿ, ರವಿ ಕಾನ, ಸತೀಶ ರೆಂಜಮೂಲೆ,ಗಣೇಶ ಅಬ್ಬಿಕಟ್ಟೆ, ಧರ್ಮೇಶ ಕಾನ, ಸಂಕಪ್ಪ ನಲ್ಕ, ಸತೀಶ್ ಬಂಗೇರ ವರ್ಮುಡಿ, ರವೀಂದ್ರ ಹೊಸಮನೆ, ಉಮೇಶ ಕಟ್ಟಡ್ಕ ಚೋಮ ನಾಯ್ಕ ಬನಾರಿ, ದಿವಾಕರ ಕುದುಕ್ಕೊಳಿ ಶಿವ ನಾಯ್ಕ ತೋಡಕರೆ ಮೊದಲದವರು ಉಪಸ್ಥಿತರಿದ್ದರು. ಕಮಲಾಕ್ಷ ನಾಯಕ್ ನಲ್ಕ ಕೇರಿಮೂಲೆ ಕಾರ್ಯಕ್ರಮ ನಿರೂಪಿಸಿದರು.



