HEALTH TIPS

FIFA 2026 | ಅರ್ಜೆಂಟೀನ-ಸ್ಪೇನ್ ಫೈನಲ್‌ಗೆ : ಚರ್ಚೆಗೆ ಗ್ರಾಸವಾದ 5 ವರ್ಷ ಹಳೆಯ ಟ್ವೀಟ್

ನ್ಯೂಯಾರ್ಕ್: ಈಗ ನಡೆಯುತ್ತಿರುವ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಐದು ವರ್ಷಗಳ ಹಳೆಯ ಟ್ವೀಟ್‌ವೊಂದು ಭಾರೀ ಚರ್ಚೆಗೆ ಗ್ರಾಸವಾಗಿದೆ. 2021ರ ಜುಲೈ 2ರಂದು ಪೋಸ್ಟ್ ಮಾಡಲಾಗಿರುವ ಟ್ವೀಟ್‌ವೊಂದರಲ್ಲಿ 2026ರ ವಿಶ್ವಕಪ್ ಫೈನಲ್‌ನಲ್ಲಿ ಅರ್ಜೆಂಟೀನ ತಂಡವು ಸ್ಪೇನ್ ತಂಡವನ್ನು ಎದುರಿಸಲಿದ್ದು, ಅರ್ಜೆಂಟೀನವು 3-2ರಿಂದ ಗೆಲ್ಲಲಿದೆ ಎಂದು ಭವಿಷ್ಯ ನುಡಿಯಲಾಗಿದೆ.


ಗುರುವಾರ ಅಟ್ಲಾಂಟದಲ್ಲಿ ನಡೆದ ಎರಡನೇ ಸೆಮಿ ಫೈನಲ್‌ನಲ್ಲಿ ಅರ್ಜೆಂಟೀನ ತಂಡವು ಇಂಗ್ಲೆಂಡ್ ತಂಡವನ್ನು 2-1 ಅಂತರದಿಂದ ಮಣಿಸಿ ಸತತ ಎರಡನೇ ಬಾರಿ ಫೈನಲ್‌ಗೆ ತಲುಪಿದೆ.ಲಿಯೊನೆಲ್ ಮೆಸ್ಸಿ ಅವರು ಎಂರೊ ಫೆರ್ನಾಂಡಿಸ್ ಹಾಗೂ ಲೌಟಾರೊ ಮಾರ್ಟಿನೆಝ್‌ಗೆ ತಲಾ ಒಂದು ಗೋಲು ಗಳಿಸಲು ನೆರವಾಗಿದ್ದರು.

'2026ರ ವಿಶ್ವಕಪ್ ಫೈನಲ್‌ನಲ್ಲಿ ಅಜೆರ್ಂಟೀನ ತಂಡವು ಸ್ಪೇನ್ ತಂಡವನ್ನು 3-2 ಅಂತರದಿಂದ ಸೋಲಿಸಿತು' ಎಂದು ಪೋಸ್ಟ್‌ನಲ್ಲಿ ಸರಳವಾಗಿ ಬರೆಯಲಾಗಿದೆ.

ಡಿಸ್ನಿ ಪಾತ್ರದ ಸ್ಟಿಚ್‌ನ ಫ್ರೊಫೈಲ್ ಫೋಟೊವನ್ನು ಹೊಂದಿರುವ ಈ ಬಳಕೆದಾರನು 2017ರಲ್ಲಿ ಟ್ವಿಟರ್‌ಗೆ ಸೇರಿದ್ದಾನೆ. ಖಾತೆಯು ಗೇಮಿಂಗ್ ವಿಷಯಕ್ಕೆ ಮೀಸಲಾಗಿರುವಂತೆ ಕಂಡುಬಂದಿದೆ.

ಈ ಟ್ವೀಟ್ ಪ್ರಕಟವಾದ ಸಮಯದಲ್ಲಿ ಯಾರೂ ಅದರ ಬಗ್ಗೆ ಹೆಚ್ಚು ಗಮನ ನೀಡಲಿಲ್ಲ. ಸ್ಪೇನ್ ತಂಡವು ಸೆಮಿ ಫೈನಲ್‌ನಲ್ಲಿ ಫ್ರಾನ್ಸ್ ತಂಡವನ್ನು 2-0 ಗೋಲುಗಳ ಅಂತರದಿಂದ ಸೋಲಿಸಿ ರವಿವಾರ ನಡೆಯಲಿರುವ ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿದ ನಂತರ ಇಂಟರ್‌ನೆಟ್‌ನಲ್ಲಿ ಈ ಪೋಸ್ಟ್ ಹೆಚ್ಚು ಗಮನ ಸೆಳೆದಿದೆ.

ಆ ನಂತರ ಈ ಪೋಸ್ಟ್ 1,51,000ಕ್ಕೂ ಅಧಿಕ ಲೈಕ್‌ಗಳನ್ನು ಹಾಗೂ ಹತ್ತಾರು ಸಾವಿರ ಮರು ಪೋಸ್ಟ್‌ಗಳನ್ನು ಕಂಡಿದೆ.

ಆತನಿಗೆ ಇದು ಹೇಗೆ ಗೊತ್ತಾಯಿತು?ಎಂದು ಒಬ್ಬ ಬಳಕೆದಾರ ಪ್ರಶ್ನಿಸಿದರೆ, 'ನೀವು ಇದನ್ನು 2022ರ ವಿಶ್ವಕಪ್‌ಗಿಂತ ಮೊದಲು ಟ್ವೀಟ್ ಮಾಡಿದ್ದೀರಿ, ದಯವಿಟ್ಟು ನಿಮ್ಮ ಈ ಊಹೆಯ ಮೂಲ ಯಾವುದು? ಎಂದು ಇನ್ನೊಬ್ಬ ಬಳಕೆದಾರ ಕೇಳಿದ್ದಾರೆ.










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries