ನವದೆಹಲಿ; ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಪಠ್ಯಪುಸ್ತಕಗಳ ಮುದ್ರಣಕ್ಕೆ ಮುದ್ರಣ ಸಾಮಾಗ್ರಿ ಪೂರೈಸುತ್ತಿದ್ದ ಮುಂಬೈ ಮೂಲದ ಸಂಸ್ಥೆಯನ್ನು ಎರಡು ವರ್ಷಗಳ ಕಾಲ ಟೆಂಡರ್ ಪ್ರಕ್ರಿಯೆಯಿಂದ ನಿರ್ಬಂಧಿಸಿದ ಪ್ರಕರಣದಲ್ಲಿ, ದಿಲ್ಲಿ ಹೈಕೋರ್ಟ್‌ನ ಸಮನ್ಸ್ ಹೊರಡಿಸಿದ್ದರೂ ನ್ಯಾಯಾಲಯಕ್ಕೆ ಹಾಜರಾಗದ ಓಅಇಖಖಿ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಸಚಿವಾಲಯ ಸೂಚಿಸಿದೆ ಎಂದು ವರದಿಯಾಗಿದೆ.
ಜೂನ್ 22ರಂದು ಓಅಇಖಖಿ ತನ್ನ ವಿರುದ್ಧ ಹೊರಡಿಸಿದ್ದ ಬ್ಲ್ಯಾಕ್‌ಲಿಸ್ಟ್ ಆದೇಶವನ್ನು ಪ್ರಶ್ನಿಸಿ ಬಫ್ನಾ ಗ್ಲೋಬಲ್ ವೆಂಚರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಜೂನ್ 24ರಂದು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಮುದ್ರಣ ಸಾಮಾಗ್ರಿ ಪೂರೈಕೆಗೆ ಒಪ್ಪಂದದಲ್ಲಿ ನಿಗದಿಪಡಿಸಿದ್ದ ಗಡುವನ್ನು ಸಂಸ್ಥೆಯು ಪಾಲಿಸದ ಕಾರಣ, ಈ ಶೈಕ್ಷಣಿಕ ವರ್ಷದ ಓಅಇಖಖಿ ಪಠ್ಯಪುಸ್ತಕಗಳ ಮುದ್ರಣದಲ್ಲಿ ವಿಳಂಬ ಉಂಟಾಗಿದೆ ಎಂದು ಮಂಡಳಿ ತನ್ನ ವಾದದಲ್ಲಿ ತಿಳಿಸಿತ್ತು.
ಈ ಬೆಳವಣಿಗೆಯನ್ನು ಶಿಕ್ಷಣ ಸಚಿವಾಲಯದ ವಕ್ತಾರರು ದೃಢಪಡಿಸಿದ್ದು, "ಆಡಳಿತಾತ್ಮಕ ಹಾಗೂ ಕಾನೂನು ಲೋಪಗಳ ವಿರುದ್ಧ ಸಚಿವಾಲಯ ಕಟ್ಟುನಿಟ್ಟಿನ ನಿಲುವು ತಳೆದಿದ್ದು, ಸಂಬಂಧಿತ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಲು ಓಅಇಖಖಿ ನಿರ್ದೇಶಕ ದಿನೇಶ್ ಕೆ. ಸಕ್ಲಾನಿ ಹಾಗೂ ಮಂಡಳಿಯ ಇತರ ಹಿರಿಯ ಅಧಿಕಾರಿಗಳು ನಿರಾಕರಿಸಿದ್ದಾರೆ.
ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಪರಿಣಾಮವಾಗಿ ಮುದ್ರಣ ಸಾಮಾಗ್ರಿ ತಯಾರಿಕೆಗೆ ಅಗತ್ಯವಾದ ಪ್ರಮುಖ ರಾಸಾಯನಿಕವಾದ ಹೈಡ್ರೋಜನ್ ಪೆರಾಕ್ಸೈಡ್ ಕೊರತೆ ಉಂಟಾಗಿತ್ತು. ಇದರಿಂದ ಬಫ್ನಾ ಸಂಸ್ಥೆಗೆ ನಿಗದಿತ ಅವಧಿಯಲ್ಲಿ ಮುದ್ರಣ ಸಾಮಾಗ್ರಿ ಪೂರೈಸಲು ಸಾಧ್ಯವಾಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
"ಓಅಇಖಖಿ ಪರವಾಗಿ ಯಾರೂ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಲೋಪಕ್ಕಾಗಿ ಸಂಬಂಧಿತ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಶಿಕ್ಷಣ ಸಚಿವಾಲಯದ ನಿಲುವಾಗಿದೆ" ಎಂದು ಮತ್ತೊಂದು ಮೂಲ ಹೇಳಿದೆ.
ಈ ನಡುವೆ, ಬಫ್ನಾ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ದಿಲ್ಲಿ ಹೈಕೋರ್ಟ್, ಸಂಸ್ಥೆಯು ಠೇವಣಿ ಇಟ್ಟಿದ್ದ 6 ಕೋಟಿ ರೂ. ಮೌಲ್ಯದ ಬ್ಯಾಂಕ್ ಗ್ಯಾರಂಟಿಯನ್ನು ಜಾರಿಗೊಳಿಸದಂತೆ ಓಅಇಖಖಿಗೆ ಮಧ್ಯಂತರ ತಡೆ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 20ಕ್ಕೆ ನಿಗದಿಪಡಿಸಲಾಗಿದೆ.
ಈ ಶೈಕ್ಷಣಿಕ ವರ್ಷದಲ್ಲಿ ಎಂಟನೇ ಹಾಗೂ ಒಂಭತ್ತನೇ ತರಗತಿಗಳ ಕೆಲವು ಪರಿಷ್ಕೃತ ಓಅಇಖಖಿ ಪಠ್ಯಪುಸ್ತಕಗಳ ಪ್ರಕಟಣೆ ವಿಳಂಬವಾಗಿತ್ತು. ಆದರೆ, ಅದರ ಕಾರಣಗಳ ಕುರಿತು ಹೆಚ್ಚಿನ ವಿವರಗಳನ್ನು ನೀಡಲು ಓಅಇಖಖಿ ನಿರಾಕರಿಸಿದೆ.
ಇದು ಈ ಶೈಕ್ಷಣಿಕ ವರ್ಷದಲ್ಲಿ ಓಅಇಖಖಿಗೆ ಸಂಬಂಧಿಸಿದ ಎರಡನೇ ಪ್ರಮುಖ ವಿವಾದವಾಗಿದೆ. ಈ ಹಿಂದೆ, ಎಂಟನೇ ತರಗತಿಯ ಸಮಾಜ ವಿಜ್ಞಾನ (ಭಾಗ-2) ಪಠ್ಯಪುಸ್ತಕದಲ್ಲಿದ್ದ ನ್ಯಾಯಾಂಗ ವ್ಯವಸ್ಥೆಗೆ ಸಂಬಂಧಿಸಿದ ವಿವಾದಾತ್ಮಕ ಅಧ್ಯಾಯದ ಕುರಿತು ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿತ್ತು. ಇದರ ಹಿನ್ನೆಲೆಯಲ್ಲಿ ಓಅಇಖಖಿ ಪುಸ್ತಕವನ್ನು ಪರಿಷ್ಕರಿಸಿ, ವಿವಾದಾತ್ಮಕ ಅಧ್ಯಾಯಗಳನ್ನು ಕೈಬಿಟ್ಟ ಹೊಸ ಆವೃತ್ತಿಯನ್ನು ಈ ವಾರದ ಆರಂಭದಲ್ಲಿ ಬಿಡುಗಡೆ ಮಾಡಿದೆ.

