HEALTH TIPS

15 ಅಂಶಗಳ ಒಪ್ಪಂದ ತಿರಸ್ಕರಿಸಿದ ಇಸ್ರೇಲ್‌

ಜರುಸಲೇಂ: ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಗಾಜಾ ಶಾಂತಿ ಒಪ್ಪಂದ ಪ್ರಸ್ತಾವವನ್ನು ತಿರಸ್ಕರಿಸಿದ್ದಾರೆ.


'ಹಮಾಸ್‌ ಸಂಘಟನೆಯು ಸಂಪೂರ್ಣವಾಗಿ ನಿಶ್ಶಸ್ತ್ರಗೊಳ್ಳುವವರೆಗೆ ಗಾಜಾದಲ್ಲಿನ ತನ್ನ ಗಡಿ ರೇಖೆಗಳಿಂದ ಇಸ್ರೇಲ್ ಹಿಂದೆ ಸರಿಯುವುದಿಲ್ಲ' ಎಂದು ಭಾನುವಾರ ಸ್ಪಷ್ಟಪಡಿಸಿದ್ದಾರೆ.

ಸಂಪುಟ ಸಭೆಯಲ್ಲಿ ಮಾತನಾಡಿದ ಅವರು, '15 ಅಂಶಗಳ ಒಪ್ಪಂದವನ್ನು ಇಸ್ರೇಲ್‌ ತಿರಸ್ಕರಿಸಿದೆ. ನಮ್ಮ ಸೇನೆ ಮತ್ತು ನಾಗರಿಕರ ಮೇಲೆ ನಿರಂತರವಾಗಿ ಬೆದರಿಕೆಗಳು ಕೇಳಿಬರುತ್ತಿವೆ' ಎಂದು ಹೇಳಿದ್ದಾರೆ.

'ಒಪ್ಪಂದದ ಕೆಲವು ಅಂಶಗಳ ಬಗ್ಗೆ ಸಹಮತವಿದೆ, ಕೆಲವಕ್ಕೆ ಸಹಮತವಿಲ್ಲ. ನಮ್ಮ ನೆಲದ ವಿಚಾರದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ತಿಳಿದಿದೆ. ಇಸ್ರೇಲ್‌ ಆಕ್ಷೇಪಗಳ ಬಗ್ಗೆ ಅಮೆರಿಕದೊಂದಿಗೆ ಚರ್ಚೆ ನಡೆಸಲಾಗುವುದು' ಎಂದು ತಿಳಿಸಿದ್ದಾರೆ.

ಈ ಒಪ್ಪಂದವನ್ನು ಹಮಾಸ್ ಜುಲೈ ಕೊನೆಯ ವಾರ ಅನುಮೋದಿಸಿದೆ. 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries