ಬದಿಯಡ್ಕ: ಬಂಟರ ಸಂಘ ಬದಿಯಡ್ಕ ಘಟಕದಿಂದ ಆ.19 ರಂದು ಬದಿಯಡ್ಕ ವಳಮಲೆಯ ಇರಾ ಸಭಾ ಭವನದಲ್ಲಿ ಬಂಟೆರೆನ ಆಟಿದ ಕೂಟ ಆಯೋಜಿಸಲಾಗಿದೆ.
ಅಪರಾಹ್ನ 2 ರಿಂದ ನಡೆಯುವ ಸಮಾರಂಭವನ್ನು ವಕೀಲ ಐ.ಸುಬ್ಬಯ್ಯ ರೈ ಉದ್ಘಾಟಿಸುವರು. ಬಂಟರ ಸಂಘದ ಬದಿಯಡ್ಕ ಘಟಕ ಅಧ್ಯಕ್ಷ ನಿರಂಜನ ರೈ ಪೆರಡಾಲ ಅಧ್ಯಕ್ಷತೆ ವಹಿಸುವರು. ನಿವೃತ್ತ ಪ್ರಾಂಶುಪಾಲ ಡಾ.ಯತೀಶ್ ಕುಮಾರ್ ರೈ ಮುಳ್ಳೇರಿಯ ವಿಶೇಷ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಚಂದ್ರಹಾಸ ರೈ ಪೆರಡಾಲ ಗುತ್ತು, ಚಿದಾನಂದ ರೈ ಮಂಜೇಶ್ವರ, ಸಂತೋಷ್ ಕುಮಾರ್ ಶೆಟ್ಟಿ ಬಜಗುತ್ತು, ಅಶೋಕ್ ರೈ ಕೊರ್ಪಳ, ಗಂಗಾಧರ ಆಳ್ವ ಪೆರಡಾಲ, ರವೀಂದ್ರನಾಥ ಶೆಟ್ಟಿ ವಳಮಲೆ, ಗಿರೀಶ್ ರೈ ವಳಮಲೆ, ಜಗನ್ನಾಥ ರೈ ಕೊರೆಕ್ಕಾನ, ಉಮೇಶ್ ರೈ ಮೇಗಿನ ಕಡಾರು, ಜಗನ್ನಾಥ ರೈ ಪೆರಡಾಲ ಗುತ್ತು, ಸಂತೋಷ್ ಕುಮಾರ್ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ ಕಡಾರು ಬೀಡು,ದಯಾನಂದ ರೈ ಕಡಾರು ಉಪಸ್ಥಿತರಿರುವರು. ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮ, ಬಂಟ ಜನಪ್ರತಿನಿಧಿಗೆ ಅಭಿನಂದನೆ, ಎಸ್ ಎಲ್ ಸಿ ಪ್ಲಸ್ ಟು ವಿದ್ಯಾರ್ಥಿಗಳಿಗೆ ಎಲ್ಲ ವಿಷಯದಲ್ಲಿ ಎ ಪ್ಲಸ್ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಾಟಿ ತಿಂಡಿ ತಿನಿಸುಗಳ ಪ್ರದರ್ಶನ, ಬಂಟರ ಶೈಲಿಯ ಉಪಹಾರ ಏರ್ಪಡಿಸಲಾಗಿದೆ.
ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ, ಅಶ್ವಿನಿ ಪ್ರದೀಪ್ ಶೆಟ್ಟಿ, ಸಮಾಜ ಬಾಂಧವರು ನೇತೃತ್ವ ವಹಿಸುವರು.



