ಉಪ್ಪಳ: ಉಪ್ಪಳ ಶಿವಾಜಿನಗರದಲ್ಲಿ ಕಡಲ್ಕೊರೆತದಿಂದ ಮನೆ ಸಮುದ್ರ ಪಾಲಾದ ಬೆನ್ನಲ್ಲೇ ಮಂಗಲ್ಪಾಡಿ ಪಂಚಾಯತಿಯ 16ನೇ ವಾರ್ಡ್ ಮುಟ್ಟಂ ಬೇರಿಕೆಯಲ್ಲಿ ರಸ್ತೆ ಸಮುದ್ರಪಾಲಾಗುತ್ತಿದ್ದು, ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. ಈ ರಸ್ತೆ ಸಂಪೂರ್ಣ ನೀರುಪಾಲಾದರೆ ಈ ಪ್ರದೇಶದ ನೆಬಿನ್, ಇಬ್ರಾಹಿಂ, ಅನಿಲ್, ಆನಂದ ಎಂಬವರ ಮನೆಗೂ ಅಪಾಯವುಂಟಾಗಲಿದೆ. ಕಳೆದೆರಡು ದಿನಗಳಿಂದ ಈ ಪರಿಸರದಲ್ಲಿ ಕಡಲ್ಕೊರೆತ ಹೆಚ್ಚಾಗಿದೆ. ಶಾರದಾನಗರದಲ್ಲಿ ಶಶಿಕಲರ ಮನೆ ನೀರುಪಾಲಾಗಿದ್ದು, ಇಲ್ಲಿನ ಲಲಿತ, ನಿವೇದಿತ, ಗಿರಿಜ ಎಂಬವರ ಮನೆಗಳು ಅಪಾಯದಂಚಿನಲ್ಲಿದೆ. ಇವರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ನಾಶನಷ್ಟಗೊಂಡ ಕುಟುಂಬಗಳಿಗೆ ಪರಿಹಾರ ಕ್ರಮ ಕೂಡಲೇ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

.jpg)
